ರಾಷ್ಟ್ರೀಯ

ಎರಡು ವರ್ಷದಲ್ಲಿ ಬಾಂಗ್ಲಾ ಗಡಿ ಬಂದ್, ಸೊನೊವಾಲ್

Pinterest LinkedIn Tumblr

sarbananda-sonowal-WEB

ಗುವಾಹಟಿ: ಭಾರತ-ಬಾಂಗ್ಲಾ ಗಡಿ ಭಾಗವನ್ನು ಇನ್ನೆರೆಡು ವರ್ಷಗಳಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗುವುದು, ಇದರಿಂದ ಭಾರತಕ್ಕೆ ಒಳ ನುಸುಳುವ ಆತಂಕಕ್ಕೆ ತೆರೆ ಬೀಳಲಿದೆ ಎಂದು ಅಸ್ಸಾಮಿನ ನಿಯೋಜಿತ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ.

80 ರ ದಶಕದ ವಿದೇಶಿ ವಿರೋಧಿ ವಿದ್ಯಾರ್ಥಿ ಚಳುವಳಿ ಇಂದಿನ ಚುನಾವಣೆ ವಿಜಯಕ್ಕೆ ನಾಂದಿಯಾಗಿದೆ ಎಂದು ಸೊನೊವಾಲ್ ಹೇಳಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗಡಿ ನುಸುಳುವಿಕೆ ವಿಷಯವನ್ನು ಪ್ರಮುಖ ವಿಷಯವನ್ನಾಗಿ ಮಾಡಿತ್ತು.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗಡಿ ಸಮಸ್ಯೆ ಬಗೆಹರಿಸಲು 2 ವರ್ಷದ ಕಾಲಾವಕಾಶ ನೀಡಿದ್ದಾರೆ. ಭಾರತ ಬಾಂಗ್ಲಾ ಗಡಿಯಾದ ಕರೀಮ್ಗರ ಜಿಲ್ಲೆಯಲ್ಲಿ ಜನವರಿಯಿಂದ ಮುಳ್ಳು ತಂತಿ ನಿರ್ಮಾಣ ಕಾರ್ಯ ನಡೆದಿದೆ. ಅಸ್ಸಾಮ್ ಗಡಿ ಪ್ರದೇಶಗಳಲ್ಲಿ ಇನ್ನು ಎರಡು ವರ್ಷಗಳಲ್ಲಿ ಗಡಿಯನ್ನು ಬಂದ್ ಮಾಡಲಾಗುವುದು ಇದರಿಂದ ಒಳನುಸುಳುವಿಕೆ ತಡೆಗಟ್ಟುವಿಕೆ ಜತೆಗೆ ಜನರಿಗೆ ಅರಿವನ್ನು ಮೂಡಿಸಲಾಗುವುದು ಎಂದು ಸೊನೊವಾಲ್ ಹೇಳಿದರು.

Comments are closed.