ರಾಷ್ಟ್ರೀಯ

ಮಾಜಿ ಪ್ರಧಾನಿ ರಾಜೀವ್ ಗಾಂಧಿ 25ನೇ ಪುಣ್ಯ ಸ್ಮರಣೆ

Pinterest LinkedIn Tumblr

Gandhi-Webನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರ 25ನೇ ವಾರ್ಷಿಕ ಪುಣ್ಯ ತಿಥಿ ಅಂಗವಾಗಿ ವೀರಭೂಮಿಯಲ್ಲಿ ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಕಾಂಗ್ರೆಸ್, ರಾಜೀವ್ಗಾಂಧಿ ಪುತ್ರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಅಳಿಯ ರಾಬರ್ಟ್ ವಾದ್ರಾ ಮತ್ತಿತರರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಮಾಜಿ ಪ್ರಧಾನಿ ಮನಮೋಹನ್ಸಿಂಗ್, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್, ಅಹ್ಮದ್ ಪಟೇಲ್, ಸುಶೀಲ್ ಕುಮಾರ್ ಶಿಂಧೆ, ಶೀಲಾ ದೀಕ್ಷಿತ್ ಈ ಸಂದರ್ಭ ಹಾಜರಿದ್ದು ನಮನ ಸಲ್ಲಿಸಿದರು.

Comments are closed.