ರಿಯೋ ಡಿ ಜನೈರೊ: ಮುಂಬರುವ ರಿಯೋ ಒಲಿಂಪಿಕ್ಸ್ನಲ್ಲಿ ಸಂದರ್ಭದಲ್ಲಿ ಸುಮಾರು 4,50,000 ಕಾಂಡೋಮ್ಳು ಒಲಿಂಪಿಕ್ ಗ್ರಾಮದಲ್ಲಿ ಉಚಿತವಾಗಿ ಸರಬರಾಜಾಗಲಿವೆ ಇದು ಹಿಂದೆಂದಿಗಿಂತಲೂ ಅಧಿಕ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.
ಮಹಿಳೆಯರಿಗಾಗಿ 1 ಲಕ್ಷ ವಿಶೇಷ ನಿರೋಧ್ಗಳು ಹಾಗೂ ಪುರುಷರಿಗಾಗಿ 3,50,000 ನಿರೋಧ್ಗಳು ಸರಬರಾಜಾಗಲಿವೆ. ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಸುರಕ್ಷಿತ ಲೈಂಗಿಕತೆಗಾಗಿ ಹತ್ತು ಸಾವಿರಕ್ಕೂ ಅಧಿಕ ಕಾಂಡೋಮ್ಳನ್ನು ನೀಡಲಾಗುತ್ತದೆ.
ಬ್ರೆಜಿಲ್ನಲ್ಲಿ ಹೆಚ್ಚುತ್ತಿರುವ ಜಿಕಾ ವೈರಸ್ ಸಮಸ್ಯೆಗೆ ಏನು ಪರಿಹಾರ ಕಂಡುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಕಮಿಟಿ, ಜಿಕಾ ಸೊಳ್ಳೆಯಿಂದ ಹರಡುವ ರೋಗವಾದರೂ ಅದು ಹರಡುವುದು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಆದ್ದರಿಂದಲೇ ನಿರೋಧ್ಗಳ ಉಚಿತ ಸರಬರಾಜಿಗೆ ಮುಂದಾಗಿರುವುದಾಗಿ ಹೇಳಿದರು. ಜುಲೈ 24 ರಿಂದ ಅಗಸ್ಟ್ 5 ರವರೆಗೆ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿರುವುದಾಗಿ ಸಮಿತಿ ತಿಳಿಸಿದೆ.
Comments are closed.