ಮನೋರಂಜನೆ

ಅಭಿಷೇಕ್ ಬಚ್ಚನ್ – ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು…!

Pinterest LinkedIn Tumblr

Aishwarya-Abhishek-Bachchan

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ದಾಂಪತ್ಯ ಚೆನ್ನಾಗಿಯೇ ಇತ್ತು. ಅದರೆ ಈ ಜೋಡಿ ಮೇಲೆ ಅದು ಯಾರಾ ಕಣ್ಣು ಬಿತ್ತೋ ಗೋತ್ತಿಲ್ಲ, ಅಭಿ- ಐಶು ಮಧ್ಯೆ ವಿರಸ ಉಂಟಾಗಿದ್ದು ಸದ್ಯ ಅದು ಜಗಜಾಹೀರಾಗಿದೆ.

ಇತ್ತೀಚೆಗೆ ಬಹುನಿರೀಕ್ಷಿತ ‘ಸರಬ್ಜಿತ್’ ಚಿತ್ರದ ಪ್ರೀಮಿಯರ್ ಶೋ ಬಳಿಕ ಮಾಧ್ಯಮಗಳೆದುರು ಕಾಣಿಸಿಕೊಂಡ ಐಶ್ವರ್ಯಾರೈ ರನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಲು ಮಾಧ್ಯಮಗಳು ಕಾಯುತ್ತಿದ್ದ ವೇಳೆ, ಪೋಸ್ ನೀಡಲು ಐಶು ತಮ್ಮ ಪತಿಯನ್ನು ಕೂಡ ಕರೆದರು. ಆದರೆ ಇದನ್ನು ಲೆಕ್ಕಿಸದ ಅಭಿ ಕೇಳಿಸಿಯೂ ಕೇಳದಂತೆ ನಟಿಸಿ ಅಲ್ಲಿಂದ ಹೊರನಡೆದಿದ್ದಾರೆ. ಇದರಿಂದ ಮುಜುಗರಕ್ಕೆ ಈಡಾದ ಐಶು ಒಲ್ಲದ ಮನಸ್ಸಿನಿಂದ ಕ್ಯಾಮೆರಾ ಕಣ್ಣಿಗೆ ಸೆರೆಯಾದರು.

ಸದ್ಯ ಈ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಅಭಿ- ಐಶು ಸಂಸಾರದಲ್ಲಿ ಬಿರುಕು ಮೂಡಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

Comments are closed.