ಕನ್ನಡ ವಾರ್ತೆಗಳು

ದೇವಾಡಿಗರ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಒದಗಿಸಲು ಯತ್ನ – ಶಾಸಕ ಕೆ. ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ಈ ಬಾರಿ ಶಾಸಕನಾದ ಬಳಿಕ ಇಲ್ಲಿನ ವಿವಿಧ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಿದ್ದು, ದೇವಾಡಿಗ ಸಮುದಾಯದವರು ತಮ್ಮ ಭವನ ನಿರ್ಮಾಣಕ್ಕೆ ಮುಂದಾದರೆ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಜೆ.ಎನ್. ಆರ್ ಕಲಾ ಮಂದಿರದಲ್ಲಿ ದೇವಾಡಿಗ ವೈಭವ ಕಲ್ಚರಲ್ ಕ್ಲಬ್ ಅರ್ಪಿಸುವ ದೇವಾಡಿಗ ಒಕ್ಕೂಟ ಬೈಂದೂರು, ಮತ್ತು ದೇವಾಡಿಗ ವೇಲ್‌ಫೇರ್ ಅಸೋಷಿಯೇಶನ್ ಮುಂಬೈ ಸಹಯೋಗದಲ್ಲಿ ನಡೆದ ದೇವಾಡಿಗ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Byndoor_Devadiga_Vaibhava-2016 (1)

Byndoor_Devadiga_Vaibhava-2016 (13) Byndoor_Devadiga_Vaibhava-2016 (16) Byndoor_Devadiga_Vaibhava-2016 (12) Byndoor_Devadiga_Vaibhava-2016 (17) Byndoor_Devadiga_Vaibhava-2016 (3) Byndoor_Devadiga_Vaibhava-2016 (5) Byndoor_Devadiga_Vaibhava-2016 (14) Byndoor_Devadiga_Vaibhava-2016 (10) Byndoor_Devadiga_Vaibhava-2016 (9) Byndoor_Devadiga_Vaibhava-2016 (15) Byndoor_Devadiga_Vaibhava-2016 (7)  Byndoor_Devadiga_Vaibhava-2016 (8)

ದೇವಾಡಿಗ ಸಮುದಾಯದವರು ದೇವಳದಲ್ಲಿ ಸೇವೆ ರೂಪದಲ್ಲಿ ಕಾರ್‍ಯನಿರ್ವಹಿಸುತ್ತಿದ್ದಾರೆ, ಅವರಿಗೆ ಸೂಕ್ತ ವೇತನ ಕಲ್ಪಿಸುವಂತೆ ಸಮುದಾಯದ ಮುಖಂಡರ ಹಲವು ವರ್ಷದ ಬೇಡಿಕೆಯಾಗಿದೆ, ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಹಿಸಲಾಗಿದೆ. ಯಾವುದೇ ಸಮುದಾಯ ಮುಂಚೂಣಿಗೆ ಬರಬೇಕಾದರೇ ಆ ಸಮುದಾಯದವರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಿಬೇಕು ಎಂದು ಅಭಿಪ್ರಾಯಪಟ್ಟರು.

ಹೇನಬೇರು ಪ್ರದೇಶಕ್ಕೆ ಸಾರಿಗೆ ಸಂಪರ್ಕ:
ಕಳೆದ ವರ್ಷ ರಾಜ್ಯಾದಾದ್ಯಂತ ಸಂಚಲನ ಮೂಡಿಸಿದ ಅಕ್ಷತಾ ದೇವಾಡಿಗ ಕೊಲೆ ಪ್ರಕರಣದ ಬಳಿಕ ಅವರ ಹುಟ್ಟೂರು ಹೇನ್‌ಬೇರ್ ಭಾಗದಲ್ಲಿ ಈಗಾಗಲೇ ದಾರಿದೀಪ ಹಾಗೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ, ಅಲ್ಲದೇ ಆ ಭಾಗದಲ್ಲಿ ಗ್ರಾಮಿಣ ಸಾರಿಗೆ ಜಾರಿಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ರಾಜ್ಯ ಅರಣ್ಯ ಇಲಾಖೆ ಮಹಾಮಂಡಲದ ಅಧ್ಯಕ್ಷ ರಘುರಾಮ ದೇವಾಡಿಗ ಕಾರ್‍ಯಕ್ರಮವನ್ನು ಉದ್ಘಾಟಿಸಿದರು, ಬೈಂದೂರು ದೇವಾಡಿಗರ ಒಕ್ಕೂಟದ ಅಧ್ಯಕ್ಷ ಕೆ.ಜಿ. ಸುಬ್ಬ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

Byndoor_Devadiga_Vaibhava-2016 (11) Byndoor_Devadiga_Vaibhava-2016 (4) Byndoor_Devadiga_Vaibhava-2016 (6) Byndoor_Devadiga_Vaibhava-2016 (2)

ಕಾರ್ಯಕ್ರಮದಲ್ಲಿ ಕುಂದಾಪುರ ಎಜ್ಯುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಸದಸ್ಯರಾದ ರಾಜು ದೇವಾಡಿಗ, ಸುಜಾತ ದೇವಾಡಿಗ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ವಾಮನ್ ಮುರೋಳಿ, ಮಂಗಳೂರು ಎಸ್.ಡಿ‌ಎಂ ಪಿ.ಜಿ ಸೆಂಟರ್ ನಿರ್ದೇಶಕ ಡಾ. ಕೆ. ದೇವರಾಜ್, ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಪ್ರಗತಿ ಸೌಹಾರ್ದ ಕೋ ಆಪರೇಟಿವ್‌ನ ಲಕ್ಷೀಕಾಂತ ಬೆಸ್ಕೂರು, ಪ್ರಿಯದರ್ಶಿನಿ ಬೆಸ್ಕೂರು, ಬೈಂದೂರು ದೇವಾಡಿಗ ಒಕ್ಕೂಟದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಬೈಂದೂರು ದೇವಾಡಿಗ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ದೇವಾಡಿಗ, ಬೆಂಗಳೂರು ದೇವಾಡಿಗ ನವೋದಯ ಸಂಘದ ಅಧ್ಯಕ್ಷ ಹರಿ ದೇವಾಡಿಗ, ಕುಂದಾಪುರ ದೇವಾಡಿಗ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಮಂಜು ದೇವಾಡಿಗ, ಭಟ್ಕಳ ದೇವಾಡಿಗ ಸಂಘದ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಉಡುಪಿ ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಚಂದ್ರಕಾಂತ್ ದೇವಾಡಿಗ, ಉದ್ಯಮಿ ನರಸಿಂಹ ದೇವಾಡಿಗ, ನಾವುಂದ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಬಿಜೂರು ಗ್ರಾಪಂ ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ಕಿರಿಮಂಜೇಶ್ವರ ಗ್ರಾಪಂ ಸದಸ್ಯ ಈಶ್ವರ ದೇವಾಡಿಗ,ಬೆಳ್ಮಣ್ ದೇವಾಡಿಗ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಸಂತಕುಮಾರ್ ನಿಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ರಂಗನಟ ಗಿರೀಶ್ ಬೈಂದೂರು ಪ್ರಸ್ತಾವನೆಗೈದರು. ದೇವಾಡಿಗ ವೈಭವ ಕಾರ್ಯಕ್ರಮದ ಜೊತೆ ಕಾರ್ಯದರ್ಶಿ ಅವಿನಾಶ್ ಬಿ. ದೇವಾಡಿಗ ಸ್ವಾಗತಿಸಿ, ಪ್ರವೀಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Comments are closed.