ರಾಷ್ಟ್ರೀಯ

ಸಿಬಿಎಸ್ಇ 12ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ದೆಹಲಿಯ ಸುಕೃತಿ ಗುಪ್ತಾ ಪ್ರಥಮ ಸ್ಥಾನ

Pinterest LinkedIn Tumblr

SUKRITI

ನವದೆಹಲಿ: ಸಿಬಿಎಸ್ಇ 12ನೇ ತರಗತಿ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದೆಹಲಿಯ ಮೊಂಟ್ಫೋರ್ಟ್ ಶಾಲೆಯ ವಿದ್ಯಾರ್ಥಿನಿ ಸುಕೃತಿ ಗುಪ್ತಾ ಅವರು 500 ಅಂಕಗಳಿಗೆ 497 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಿಬಿಎಸ್ ಇ ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಮೊದಲ ಮೂರು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ. ಪಲಕ್ ಗೋಯಲ್ ದ್ವಿತೀಯ ಸ್ಥಾನ ಪಡೆದರೆ, ಸೌಮ್ಯ ಉಪ್ಪಾಲ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ. ಸಿಬಿಎಸ್ಇಯಲ್ಲಿ ಒಟ್ಟಾರೆ ಶೇ.88. 58ರಷ್ಟು ಬಾಲಕಿಯರು ಹಾಗೂ ಶೇ.78.85ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ.

ಇನ್ನು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಸುಕೃತಿ, ಕಠಿಣ ಪರಿಶ್ರಮವಿದ್ದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ನಾನು ನಂಬಿದ್ದು ಸ್ವ ಅಧ್ಯಯನವನ್ನು. ಜೊತೆಗೆ ಪರೀಕ್ಷೆಗೆ ಸಿದ್ಧಳಾಗಲು ಎನ್ಸಿಇಆರ್ಟಿ ಪುಸ್ತಕಗಳನ್ನು ಅನುಸರಿಸಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಫಲಿತಾಂಶಕ್ಕಿಂತ ಈ ವರ್ಷ ಶೇ. 2.38ರಷ್ಟು ಹೆಚ್ಚು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 82ರಷ್ಟು ಬಂದಿತ್ತು. ಈ ಬಾರಿ ಫಲಿತಾಂಶ 83.05ರಷ್ಟು ಬಂದಿದೆ.

Comments are closed.