
ಲಕ್ನೋ: ಊಟವಿಲ್ಲದೇ, ನೀರಿಲ್ಲದೇ ಬದುಕಿದವರನ್ನು ಕೇಳಿದ್ದೀರಾ. ಆದ್ರೆ ಇಲ್ಲೊಬ್ಬ ಮಹಿಳೆ ಆಹಾರ ನೀರು ಸಿಗದಕ್ಕೆ 12 ವರ್ಷದಿಂದ ಮಣ್ಣನ್ನು ತಿಂದು ಬದುಕುತ್ತಿದ್ದಾರೆ.
ಹೌದು. ಉತ್ತರ ಪ್ರದೇಶದ ಲಲಿತ್‍ಪುರ್ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮ ರಾಜ್ವಾರ ದಲ್ಲಿನ ಮಹಿಳೆಯೊಬ್ಬರು ಆಹಾರ ಸಿಗದ್ದಕ್ಕೆ 12 ವರ್ಷದಿಂದ ಮಣ್ಣನ್ನು ತಿಂದು ಬದುಕುತ್ತಿದ್ದಾರೆ. ಆದ್ರೆ ಇದೀಗ ಆಕೆಯ ಹೊಟ್ಟೆಯಲ್ಲಿ ಕಲ್ಲುಗಳೇ ತುಂಬಿಕೊಂಡಿದ್ದು, ಸರಿಯಾಗಿ ಜೀರ್ಣಕ್ರಿಯೆ ಆಗದೇ ಆಕೆ ಆಸ್ಪತ್ರೆ ಕದ ತಟ್ಟುವಂತೆ ಮಾಡಿದೆ.
ಮಣ್ಣು ತಿನ್ನಲು ಕಾರಣವೇನು?: ಶಕುನ್ ಹೆಸರಿನ ಮಹಿಳೆ ರಾಜ್ವಾರ ಗ್ರಾಮದ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಹೆಚ್ಚಿನ ಹಣ ನೀಡಿ ಆಹಾರ ಖರೀದಿ ಮಾಡುವ ಶಕ್ತಿ ಇಲ್ಲ. ಹೀಗಾಗಿ ಶಕುನ್ ತಾನು ಬದುಕಲೇಬೇಕೆಂದು ಮಣ್ಣನ್ನು ತಿನ್ನಲು ಆರಂಭಿಸಿದ್ದಾರೆ. ಇನ್ನೊಂದು ಆತಂಕಕಾರಿ ವಿಚಾರವೆಂದರೆ ಹಸಿವು ತಾಳಲಾರದೇ ಉಳಿದವರು ಕೂಡ ಶಕುನ್ ಕೂಡ ಇದೇ ದಾರಿ ಅರಸಿದ್ದಾರೆ.
ಸದ್ಯ ಶಕುನ್‍ಗೆ ನಡೆಯಲು ಕೂಡ ಸಮಸ್ಯೆಯಾಗುತ್ತಿದ್ದು, ಮಲಮೂರ್ತದ ವೇಳೆಯಲ್ಲೂ ನೋವು ಕಾಣಿಸಿಕೊಳ್ಳುತ್ತಿದೆಯಂತೆ. ಅಲ್ಲದೇ ಶಕುನ್‍ಗೆ ಸರ್ಕಾರದ ಯಾವುದೇ ಪ್ರಯೋಜನ ಪಡೆಯಲು ಅವರ ಬಳಿ ಪಡಿತರ ಚೀಟಿಯಾಗಲಿ ಅಥವಾ ಗುರುತಿನ ಚೀಟಿ ಇಲ್ಲದೇ ಇರುವುದು ಮತ್ತಷ್ಟು ಸಮಸ್ಯೆಯಾಗಿದೆ.
Comments are closed.