ಮನೋರಂಜನೆ

ಮದುವೆಯ ಬಗ್ಗೆ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಹೇಳಿದ್ದೇನು…?

Pinterest LinkedIn Tumblr

salman-khan2

ಮುಂಬೈ: ನಾನು ನನ್ನ ಮದುವೆಯ ಬಗ್ಗೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೆ ಅದನ್ನು ಫೇಸ್‌ಬುಕ್, ಟ್ವಿಟರ್ ಮೂಲಕ ನನ್ನ ಅಭಿಮಾನಿಗಳಿಗೆ ತಿಳಿಸುತ್ತೇನೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ಸಲ್ಮಾನ್‌ಖಾನ್ ನ ಸಹೋದರ ಸುಹೈಲ್ ಖಾನ್ ಮತ್ತು ಅಪ್ಪ ಸಲೀಂ ಖಾನ್ ರೆಸ್ಟೋರೆಂಟ್‌ವೊಂದಕ್ಕೆ ಹೋಗಿದ್ದಾಗ ಅಲ್ಲಿ ಪತ್ರಕರ್ತರು ಗುಂಪು ಸೇರಿದ್ದರು. ಅದರ ನಡುವೆ ಪತ್ರಕರ್ತನೊಬ್ಬನ ಮೇಲೆ ಸುಹೈಲ್ ಸಿಟ್ಟಾಗಿದ್ದಾರೆ ಎಂಬ ಆರೋಪವೂ ಇದೆ. ಅಲ್ಲಿದ್ದ ಜನರೆಲ್ಲ ಸಲ್ಮಾನ್ ಖಾನ್ ಮದುವೆ ಯಾವಾಗ ಎಂದು ಸುಹೈಲ್ ಮತ್ತು ಸಲೀಂಖಾನ್‌ರಲ್ಲಿ ಕೇಳಿದ್ದರು ಎನ್ನಲಾಗುತ್ತಿದೆ.

ಆದಾಗ್ಯೂ, ಸುಹೈಲ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಬಗ್ಗೆ ಐಐಎಫ್‌ಎ ಪ್ರಶಸ್ತಿ ಪ್ರಕಟ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್, ಆತ ಅನುಚಿತವಾಗಿ ವರ್ತಿಸಿಲ್ಲ. ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ನನ್ನ ಅಪ್ಪನ ಮುಂದೆ ಮೈಕ್ ಇಟ್ಟು ಕ್ಯಾಮೆರಾ ಫೋಕಸ್ ಮಾಡಿ ನನ್ನ ಮದುವೆ ಯಾವಾಗ ಎಂದು ಕೇಳಿದರೆ ಏನು ಹೇಳಬೇಕು? ಅವರಿಗೆ 80 ವರ್ಷ, ಇದೆಲ್ಲಾ ಏನು?

ಪತ್ರಕರ್ತರು ಅಪ್ಪನ ಮುಂದೆ ಮೈಕ್ ಹಿಡಿದು ಪ್ರಶ್ನೆಗಳ ಸುರಿಮಳೆಗೆರೆದಾಗ ನಾನು ಸಿಟ್ಟಾಗಿದ್ದು ನಿಜ ಎಂದು ಸೊಹೈಲ್ ಹೇಳಿದ್ದಾರೆ.

ಅದೇ ವೇಳೆ ನೀವ್ಯಾವಾಗ ಮದುವೆ ಆಗ್ತೀರಿ ಎಂಬ ಪ್ರಶ್ನೆಯನ್ನು ಕೇಳಿದಾಗ, ನಾನು ನಿಮಲ್ಲಿ ಯಾಕೆ ಹೇಳಬೇಕು? ನಾನು ನನ್ನ ಅಭಿಮಾನಿಗಳಿಗೆ ಫೇಸ್‌ಬುಕ್ ಮತ್ತು ಟ್ವಿಟರ್ ಮೂಲಕ ಈ ವಿಷಯ ತಿಳಿಸುತ್ತೇನೆ ಎಂದು ಸಲ್ಲು ಉತ್ತರಿಸಿದ್ದಾರೆ.

Comments are closed.