ರಾಷ್ಟ್ರೀಯ

ಉಬರ್ ಕಾರು ಚಾಲಕನ ನಿದ್ದೆ…ಪ್ರಯಾಣಿಕನೆ ಡ್ರೈವಿಂಗ್ ಮಾಡಿಕೊಂಡು ಮನೆ ಸೇರಿದ !

Pinterest LinkedIn Tumblr

Uber

ಗುರಂಗಾವ್: ಉಬರ್ ಕಾರು ಚಾಲಕ ನಿದ್ದೆಗೆ ಜಾರಿದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ತಾನೇ ತನ್ನ ಮನೆಯವರೆಗೂ ಡ್ರೈವಿಂಗ್ ಮಾಡಿಕೊಂಡು ಹೋಗಿರುವ ಘಟನೆ ಗುರಂಗಾವ್ ನಲ್ಲಿ ನಡೆದಿದೆ.

ಗುರಂಗಾವ್ ನಲ್ಲಿ ಹಣಕಾಸು ವಿಶ್ಲೇಷಕನಾಗಿರುವ ಗಿಲ್ ಎಂಬಾತ ಮೇ 15 ರಂದು ಡಿಫೆನ್ಸ್ ಕಾಲೋನಿಗೆ ತೆರಳಬೇಕಿತ್ತು. ಹೀಗಾಗಿ ಉಬರ್ ಕ್ಯಾಬ್ ಗೆ ಕಾಯುತ್ತಿದ್ದರು. ಈ ವೇಳೆ ಬಂದ ಚಾಲಕ ಅರ್ಧ ನಿದ್ರೆಯಲ್ಲಿದ್ದ. ನಾನು ಡ್ರೈವಿಂಗ್ ಮಾಡಲು ಆಗುತ್ತದೆಯೆ ಎಂದು ಕೇಳಿದೆ. ಆತ ಭರವಸೆ ಕೊಟ್ಟ ನಂತರವಷ್ಟೇ ನಾನು ಕಾರು ಹತ್ತಿದೆ.

ಅರೋಬಿಂದೋ ಮಾರ್ಗ್ ತಲುಪುವ ವೇಳೆಗೆ ಆತ ರಸ್ತೆಯ ವಿಭಜಕಕ್ಕೆ ನಿದ್ದೆಗಣ್ಣಿನಲ್ಲಿ ಡಿಕ್ಕಿ ಹೊಡೆದ. ನಂತರ ನಾನು ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಹೇಳಿ, ನನ್ನ ಡ್ರೈವಿಂಗ್ ಲೈಸೆನ್ಸ್ ತೋರಿಸಿ, ನಾನೇ ಡ್ರೈವಿಂಗ್ ಮಾಡುವುದಾಗಿ ಹೇಳಿ ಮನೆಯವರೆಗೂ ಕಾರು ಡ್ರೈವ್ ಮಾಡಿಕೊಂಡು ಬಂದೆ.

ಮನೆ ತಲುಪಿದ ನಂತರ ಆತನನ್ನು ಎಬ್ಬಿಸಲು ಹರಸಾಹಸ ಪಡಬೇಕಾಯಿತು. 427 ರು. ಬಿಲ್ ಆಗಿತ್ತು. ನಾನು 500 ರು. ನೋಟನ್ನು ಆತನ ಜೇಬಿನಲ್ಲಿಟ್ಟು ಮನೆ ಸೇರಿದೆ ಎಂದು ಗಿಲ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆ ಚಾಲಕ ಕುಡಿದಿರಲಿಲ್ಲ. ಆದರೆ ಏನೋ ಒಂದು ವಸ್ತುವನ್ನು ಬಾಯಲ್ಲಿ ಹಾಕಿಕೊಂಡು ಜಗಿಯುತ್ತಿದ್ದ ಎಂದು ಹೇಳಿದ್ದಾರೆ. ಬೆಳಗ್ಗೆ ಆತ ಉಬರ್ ಕಚೇರಿಗೆ ಕರೆ ಮಾಡಿದ್ದ, ರಾತ್ರಿ ತಾನು ಪಡೆದಿದ್ದ 500 ರು. ವಾಪಸ್ ನೀಡುವಂತೆ ಕಂಪನಿಯವರು ಆತನಿಗೆ ಸೂಚನೆ ನೀಡಿದ್ದರು.

Comments are closed.