
ಕಾನ್ಪುರ: ಒಂದು ಹಾಲಿ ಚಾಂಪಿಯನ್ ತಂಡ ಮತ್ತು ಇನ್ನೊಂದು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ತಂಡ. ಎರಡೂ ತಂಡಗಳಿಗೂ ಪ್ಲೇ ಆಫ್‌ಹಂತ ತಲುಪುವ ಛಲ. ಶನಿವಾರ ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್‌ತಂಡಗಳು ಈಗ ನಾಕೌಟ್ ಹೊಸ್ತಿಲಲ್ಲಿ ನಿಂತಿವೆ.
ಬುಧವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದ್ದ ರೈನಾ ಬಳಗವು ಈಗ 16 ಅಂಕಗಳೊಂದಿಗೆ ಎರಡನೇ ಸ್ಥಾನ ದಲ್ಲಿದೆ. ಆರ್‌ಸಿಬಿ ಮತ್ತು ನೈಟ್ ರೈಡರ್ಸ್ 14 ಗಳಿಸಿವೆ. ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಎರಡೂ ತಂಡಗಳು ಲಯನ್ಸ್‌ಗಿಂತ ಉತ್ತಮವಾದ ರನ್‌ರೇಟ್ ಕೂಡ ಹೊಂದಿವೆ. ಈ ತಂಡಗಳೂ ಇನ್ನೂ ಒಂದೊಂದು ಪಂದ್ಯ ಆಡಬೇಕು.
ಶನಿವಾರ ಗ್ರೀನ್‌ಪಾರ್ಕ್‌ನಲ್ಲಿ ಮುಂಬೈ ಏನಾದರೂ ಸೋತರೆ ಟೂರ್ನಿಯಿಂದ ಹೊರಬೀಳುವುದು ಖಚಿತ. ಗೆದ್ದರೆ ನಾಕೌಟ್ ಹಂತದ ಆಸೆ ಇಟ್ಟುಕೊಳ್ಳಬಹುದು. ಅದೂ ಕೋಲ್ಕತ್ತ ಮತ್ತು ಆರ್‌ಸಿಬಿ ತಂಡಗಳು ತಮ್ಮ ಪಂದ್ಯಗಳಲ್ಲಿ ಸೋಲಬೇಕು ಎಂದು ಪ್ರಾರ್ಥಿಸಬೇಕು.
ಮುಂಬೈ ತಂಡವು ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಮತ್ತು ಅಂಬಟಿ ರಾಯುಡು ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೃಣಾಲ್ ಪಾಂಡ್ಯ ಅವರ ಆಲ್‌ರೌಂಡ್‌ಆಟವು ಕೆಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದೆ. ಡೆಲ್ಲಿ ವಿರುದ್ಧದ ಕೃಣಾಲ್ 86 ರನ್ ಗಳಿಸಿದ್ದರು. ಜೋಸ್ ಬಟ್ಲರ್ ಮತ್ತು ಕೀರನ್ ಪೊಲಾರ್ಡ್ ಅವರು ಫಾರ್ಮ್‌ಗೆ ಮರಳಿದರೆ ತಂಡದ ಬ್ಯಾಟಿಂಗ್ ಬಲ ಹೆಚ್ಚುವುದು ಖಚಿತ.
ಟೂರ್ನಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿರುವ ಮಿಷೆಲ್ ಮೆಕ್‌ಲೆಂಗಾನ್, 14 ವಿಕೆಟ್ ಗಳಿಸಿರುವ ಜಸ್‌ಪ್ರೀತ್ ಬೂಮ್ರಾ ಮತ್ತು ಅನುಭವಿ ಸ್ಪಿನ್ನರ್ ಹರಭಜನ್‌ಸಿಂಗ್ ಅವರ ಬೌಲಿಂಗ್ ತಂಡಕ್ಕೆ ಜಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಆದರೆ, ಪದಾರ್ಪಣೆಯ ಟೂರ್ನಿಯ ಲ್ಲಿಯೇ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿ ರುವ ಲಯನ್ಸ್‌ತಂಡ ಸುಲಭವಾಗಿ ಅವಕಾಶ ಬಿಟ್ಟುಕೊಡುವುದನ್ನು ನಿರೀಕ್ಷಿಸಲಾಗದು. ರೈಡರ್ಸ್‌ವಿರುದ್ಧ ಡ್ವೇನ್ ಸ್ಮಿತ್ ಅವರ ಅಮೋಘ ಬೌಲಿಂಗ್‌ಲಯನ್ಸ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿತ್ತು.
ಬ್ಯಾಟಿಂಗ್‌ನಲ್ಲಿ ನಾಯಕ ಸುರೇಶ್ ರೈನಾ, ರವೀಂದ್ರ ಜಡೇಜ, ಬ್ರೆಂಡನ್ ಮೆಕ್ಲಮ್, ಡ್ವೇನ್ ಸ್ಮಿತ್, ಆ್ಯರನ್ ಫಿಂಚ್, ಆಲ್‌ರೌಂಡ್ ಡ್ವೇನ್ ಬ್ರಾವೊ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ವಳ ಕುಲಕರ್ಣಿ, ಬ್ರಾವೊ ಮತ್ತು ಸ್ಮಿತ್ ಅವರ ಮೇಲೆ ಬೌಲಿಂಗ್ ವಿಭಾಗ ಅವಲಂಬಿತವಾಗಿದೆ. ಸ್ಪಿನ್ನರ್‌ಗಳಾದ ಪ್ರವೀಣ್ ತಾಂಬೆ ಮತ್ತು ಜಡೇಜ ಅವರು ನಿರೀಕ್ಷಿತ ಯಶಸ್ಸು ಪಡೆ ದಿಲ್ಲ. ಕೊನೆಯ ಪಂದ್ಯದಲ್ಲಿ ಸಂಘಟಿತ ಹೋರಾಟ ಮೂಡಿಬಂದರೆ ಚಾಂಪಿ ಯನ್ ತಂಡಕ್ಕೆ ಸೋಲುಣಿಸುವುದು ಖಚಿತ.
ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
Comments are closed.