ಮನೋರಂಜನೆ

ನಿಲ್ಲದ ರಿಷಿ ಕಪೂರ್ ಟ್ವೀಟ್ ! ಗಾಂಧಿ-ನೆಹರೂ ಹೆಸರು ಬೇಡ…ಬದಲಿಸಿ

Pinterest LinkedIn Tumblr

Rishi-Kapoor

ದೆಹಲಿ: ದೆಹಲಿಯ 64 ಸ್ಥಳಗಳಿಗೆ ಗಾಂಧಿ ನೆಹರೂ ಹೆಸರನ್ನು ಇರಿಸಲಾಗಿದೆ. ಈ ದೇಶಕ್ಕೆ ಅವರು ಕೊಟ್ಟಿರುವ ಮಹೋನ್ನತ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿ ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ಟ್ವೀಟ್ ಮಾಡಿದ್ದಾರೆ.

ನೆಹರು ಮತ್ತು ಇಂದಿರಾ ಗಾಂಧಿ ಕಾಲಾನಂತರ ಕೇವಲ ದೆಹಲಿ ಒಂದರಲ್ಲೇ 64ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಿಗೆ ಅವರ ಹೆಸರು ನಾಮಕರಣಗೊಂಡಿದೆ ಎಂಬ ಭೂಪಟ ಸಹಿತ ದಾಖಲೆಯನ್ನು ಬಹಿರಂಗ ಗೊಳಿಸಿದ್ದಾರೆ. ದೇಶದ ಪ್ರತಿಷ್ಠಿತ ರಸ್ತೆ, ಬಸ್-ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಗಾಂಧಿ ಕುಟುಂಬದ ಹೆಸರನ್ನೇ ಏಕೆ ಇಡಬೇಕು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಆಡಳಿತ ನಡೆಸಿದ ಸಂದರ್ಭ ಕಾಂಗ್ರೆಸ್ ಸರ್ಕಾರ ನಾಮಕರಣ ಮಾಡಿರುವ ಸ್ಥಳಗಳ ಹೆಸರನ್ನು ಕೂಡಲೇ ಬದಲಿಸುವ ಅಗತ್ಯವಿದೆ ಎಂದಿದ್ದಾರೆ. ಈ ಬಗ್ಗೆ ಜನಾದೇಶ ಕೇಳಿರುವ ಅವರು, ಬಾಂದ್ರಾ -ವರ್ಲಿ ಸಮುದ್ರ ಸಂಪರ್ಕ ಮಾರ್ಗಕ್ಕೆ ಖ್ಯಾತ ನಾಮರಾದ ಆರ್.ಜೆ.ಡಿ.ಟಾಟಾ, ಲತಾ ಮಂಗೇಷ್ಕರ್, ದೇವಾನಂದ್, ಅಮಿತಾಬಚ್ಚನ್ ಹೆಸರನ್ನು ಏಕೆ ಇಡಬಾರದು ಎಂಬ ಪ್ರಶ್ನೆ ಎತ್ತಿದ್ದಾರೆ.

ಫಿಲಂ ಸಿಟಿಗೆ ಹೆಸರಾಂತ ನಟರಾದ ದಿಲೀಪ್ ಕುಮಾರ್, ಅಶೋಕ್ಕುಮಾರ್, ದೇವಾನಂದ್ ಅವರ ಹೆಸರು ಇಡಬೇಕು ಎಂದು ಆಗ್ರಹಿಸಿರುವ ಅವರು,ಬಾಲಿವುಡ್ನಲ್ಲಿ ದಂತಕಥೆಯಾಗಿರುವ ರಾಜ್ ಕಪೂರ್, ಮೊಹಮ್ಮದ್ ರಫಿ, ಮನ್ನಾ ಡೇ, ಕಿಶೋರ್ ಕುಮಾರ್ ಅವರ ಹೆಸರುಗಳನ್ನೂ ಪ್ರಮುಖ ಸ್ಥಳಗಳಿಗೆ ಇಡುವ ನಿಟ್ಟಿನಲ್ಲಿ ಚಿಂತನೆಗಳು ಏಕೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದಿರಾ ಗಾಂಧಿ ಹೆಸರೇ ಬೇಕೆ ? ಮಹಾನ್ ದೇಶಭಕ್ತರಾದ ಭಗತ್ಸಿಂಗ್, ಅಂಬೇಡ್ಕರ್ ಹೆಸರನ್ನು ಕೂಡ ಇಡಬಹುದಲ್ಲವೇ ಎಂದು ಸಲಹೆ ನೀಡಿದ್ದಾರೆ.

Comments are closed.