
ಮಡಿಕೇರಿ: ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರಕ್ಕೆ ಕೊಡಗಿನ ಹುಡುಗಿಯರನ್ನು ನಾಯಕಿಯನ್ನಾಗಿ ಆಯ್ಕೆ ಮಾಡುವ ಸಲುವಾಗಿ ಮಡಿಕೇರಿಯಲ್ಲಿ ನಟ, ನಿರ್ದೆಶಕ ವೆಂಕಟ್ ಆಯ್ಕೆ ಪ್ರಕ್ರಿಯೆ ನಡೆಸಿದರು.
ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ವೆಂಕಟ್ ಸೇರಿದಂತೆ ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ನಿರ್ಮಾಪಕರು ನಾಯಕಿಯರ ಆಡಿಷನ್ ಮಾಡಿದರು. ಚಿತ್ರಕ್ಕೆ ನಾಯಕಿಯರಾಗಿ ನಟಿಸಲು ಆಸಕ್ತಿ ಇದ್ದ ಕೊಡಗಿನ ಯುವತಿಯರು ತಮ್ಮ ಭಾವಚಿತ್ರವನ್ನು ನೀಡುವುದರ ಮೂಲಕ ವೆಂಕಟ್ ಜೊತೆ ಪೋಟೋ ತೆಗೆಸಿಕೊಂಡರು.
ಚಿತ್ರದ ಬಗ್ಗೆ ಮಾತನಾಡಿದ ವೆಂಕಟ್ ಈ ಚಿತ್ರದಲ್ಲಿ ಕಾವೇರಿ ಪಾತ್ರಕ್ಕೆ ನಾಯಕಿಯಾಗಿ ಕೊಡಗಿನ ಯುವತಿಯರನ್ನೆ ಆಯ್ಕೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ಅನೇಕ ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪೊರ್ಕಿ ಹುಚ್ಚ ವೆಂಕಟ್ ಚಿತ್ರಕ್ಕೆ ನಾಯಕಿ ಆಯ್ಕೆಯಾದ ನಂತರ ಮತ್ತೆ ಸುದ್ದಿಗೋಷ್ಠಿ ನಡೆಸಲಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.
Comments are closed.