ಕನ್ನಡ ವಾರ್ತೆಗಳು

ಸಮುದ್ರ ಮಟ್ಟ ಏರಿಕೆಯಿಂದ 4 ಕೋಟಿ ಭಾರತೀಯರಿಗೆ ತೀವ್ರ ಸಂಕಷ್ಟ : ವಿಶ್ವಸಂಸ್ಥೆ ಎಚ್ಚರಿಕೆಯ ಕರೆಗಂಟೆ

Pinterest LinkedIn Tumblr

see_level_high

ವಿಶ್ವಸಂಸ್ಥೆ, ಮೇ.20:  ಭಾರತದ ಕರಾವಳಿ ಪ್ರದೇಶದ ಸಮುದ್ರ ಮಟ್ಟ ಏರಿಕೆಯಿಂದ 2050 ರ ವೇಳೆಗೆ ಸುಮಾರು 4 ಕೋಟಿ ಮಂದಿಗೆ ಅತೀವ ತೊಂದರೆಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ವಿಪರೀತ ನಗರೀಕರಣ ಹಾಗೂ ಆರ್ಥಿಕ ಅಭಿವೃದ್ಧಿಯಿಂದ ಭವಿಷ್ಯತ್ತಿನಲ್ಲಿ ಮುಂಬೈ ಹಾಗೂ ಕೋಲ್ಕತ್ತಾ ಕರಾವಳಿ ಭಾಗದ ಜನರು ತೀವ್ರ ಸಂಕಷ್ಟ ಎದುರಿಸಲಿದ್ದಾರೆ ಎಂದು ವಿಶ್ವಸಂಸ್ಥೆಯ ಪರಿಸರ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಜಾಗತಿಕ ಪರಿಸರ ಒಳನೋಟ (ಜಿಇಒ-6): ಪ್ರಾದೇಶಿಕ ನಿರ್ಧಾರಕ ವಿಭಾಗವು ಪೆಸಿಫಿಕ್, ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಭಾಗದಲ್ಲಿ ಪರಸರ ಬದಲಾವಣೆಯಿಂದ ಭೀಕರ ಪರಿಣಾಮಗಳು ಉಂಟಾಗಲಿವೆ ಎಂದು ತಿಳಿಸಿದೆ.

ಭಾರತದ ಮುಂಬೈ ಮತ್ತು ಕೋಲ್ಕತ್ತಾದಲ್ಲಿ 4 ಕೋಟಿ, ಬಾಂಗ್ಲದೇಶದ ಢಾಕಾದಿಂದ 2.5 ಕೋಟಿ, ಚೀನಾದ ಶಾಂಘೈ ಹಾಗೂ ಗುಂಗ್’ಝಾವ್’ನಿಂದ 2 ಕೋಟಿ ಹಾಗೂ 1.5 ಕೋಟಿ ಮಂದಿ ಫಿಲಿಫೈನ್ಸ್ ದೇಶಗಳ ಕರಾವಳಿ ಭಾಗದಿಂದ ಅಪಾಯ ಎದುರಿಸಲಿದ್ದಾರೆ ಎಂದು ವರದಿಯಲ್ಲಿ ಎಚ್ಚರಿಸಿದೆ.

2011 ರಲ್ಲಿ ಏಷ್ಯಾ ಹಾಗೂ ಪೆಸಿಫಿಕ್ ಭಾಗದ 6 ದೇಶಗಳಲ್ಲಿ ಪರಿಸರ ಬದಲಾವಣೆಯಿಂದ ಪ್ರವಾಹ ಸೇರಿದಂತೆ ಹಲವು ರೀತಿಯ ತೊಂದರೆಯುಂಟಾಗಿದ್ದವು ಎಂದು ವರದಿಯಲ್ಲಿ ತಿಳಿಸಲಾಗಿದೆ.

Comments are closed.