ಕನ್ನಡ ವಾರ್ತೆಗಳು

ಜಾಹಿರಾತು ಕಂಪೆನಿಯ ಒಂದು ಕೋಟಿ ರೂಪಾಯಿ ಆಫರ್’ನ್ನು ನಿರಾಕರಿಸಿದ ಜರೀನ್ ಖಾನ್

Pinterest LinkedIn Tumblr

zarena_khan_pic

ಮುಂಬಯಿ,ಮೇ.20:ದೇಹದ ತೂಕ ಕಡಿಮೆಗೊಳಿಸುವ ಔಷಧಿಯೊಂದರ ಜಾಹಿರಾತಿನಲ್ಲಿ ನಟಿಸಲು ನಿರಾಕರಿಸಿರುವ ಬಾಲಿವುಡ್ ನಟಿ ಜರೀನ್ ಖಾನ್ ಖುದ್ದು ನನಗೆ ವಿಶ್ವಾಸವಿರದ ವಸ್ತುಗಳ ಕುರಿತಾಗಿ ನಾನು ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.ಈ ಕುರಿತಾಗಿ ಮಾತನಾಡಿದ ಜರೀನ್ ಖಾನ್ ‘ನನಗೆ ವಿಶ್ವಾಸವಿಲ್ಲದ ವಸ್ತುಗಳ ಪ್ರಚಾರ ನಾನು ಮಾಡುವುದಿಲ್ಲ. ನಾಣು ಪ್ರತಿದಿನ ಜಿಮ್’ಗೆ ಹೋಗಿ ವರ್ಕೌಟ್ ಮಾಡುತ್ತೇನೆ. ಯಾಕೆಂದರೆ ದೇಹದ ತೂಕ ಇಳಿಸಲು ಯಾವುದೇ ಶಾರ್ಟ್’ಕಟ್ ಇಲ್ಲ ಎಂಬುವುದು ನನ್ನ ನಂಬಿಕೆ’ ಎಂದು ತಿಳಿಸಿದ್ದಾರೆ.

ಈ ಜಾಹಿರಾತಿಗಾಗಿ ಔಷಧಿ ತಯಾರಿಸಿದ ಕಂಪೆನಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ಒಂದು ಕೋಟಿಯ ಆಫರ್ ನೀಡಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಫಿಲ್ಮ್ ‘ವೀರಪ್ಪನ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜರೀನ್ ಖಾನ್.

ನಿರ್ದೇಶಕ ರಾಮ್’ಗೋಪಾಲ್ ವರ್ಮಾ ಅವರ ‘ವೀರಪ್ಪನ್’ ಸಿನಿಮಾದ ‘ಖಲ್ಲಾಸ್ ವೀರಪ್ಪನ್’ ಎಂಬ ಹಾಡಿನಲ್ಲಿ ಹೊಸ ಅವತಾರವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಈ ಔಷಧಿ ಮಾರಾಟದ ಆಫರ್ ಬಂದಿತ್ತು.

Comments are closed.