
ಬೆಂಗಳೂರು: ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ ಮನ್ ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಎಬಿಡಿ ವಿಲಿಯರ್ಸ್ 52 ಎಸೆತಗಳಲ್ಲಿ ಭರ್ಜರಿ 129 ರನ್ ಸಿಡಿಸಿದ್ದ ಪ್ರಶಂಸೆಗೆ ಪಾತ್ರರಾಗಿದ್ದರು. ಇದೀಗ ಡಿವಿಲಿಯರ್ಸ್ ಭರ್ಜರಿ ಆಟದ ರಹಸ್ಯ ಬಯಲಾಗಿದೆ.
ಅದೇನು ಅಂದರೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಮೊದಲ ಬಾರಿಗೆ ವಿಲಿಯರ್ಸ್ ಪತ್ನಿ ಡೇನಿಯಲ್ ಡಿ ವಿಲಿಯರ್ಸ್ ಬಂದಿದ್ದು, ಇದೇ ಸ್ಫೂರ್ತಿಯಲ್ಲಿ ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರಂತೆ. ಹೀಗಂತ ಸ್ವತಃ ವಿಲಿಯರ್ಸ್ ಹೇಳಿದ್ದಾರೆ.
ಇದೇ ಪಂದ್ಯದಲ್ಲಿ ಆರ್ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಜತೆಯಾಟ ಹಲವು ದಾಖಲೆಗಳನ್ನು ಮಾಡಿವೆ.