ರಾಷ್ಟ್ರೀಯ

ಸೇನಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೈನ್ಯಾಧಿಕಾರಿಗಳಿಗೆ ಎಸ್ ಯುವಿ ವಾಹನಗಳನ್ನು ಬಳಕೆ

Pinterest LinkedIn Tumblr

New Delhi: ITBP troops with their brand new SUV at forward areas along the China border. PTI Photo (Eds advised to see the story under DEL 19)(PTI5_15_2016_000070B)

ನವದೆಹಲಿ: ಭಾರತೀಯ ಗಡಿಗಳಲ್ಲಿನ ಸೇನೆಯ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಲು ಮತ್ತು ಸೈನ್ಯಾಧಿಕಾರಿಗಳ ಆತ್ಮಬಲ ಹೆಚ್ಚಿಸುಲ ಮುಂದಾಗಿರುವ ರಕ್ಷಣಾ ಇಲಾಖೆ ಇದೇ ಮೊದಲ ಬಾರಿಗೆ ಸೈನ್ಯಾಧಿಕಾರಿಗಳಿಗೆ ಎಸ್ ಯುವಿ ವಾಹನಗಳನ್ನು ಬಳಕೆಗೆ ನೀಡಿದೆ.

ಭಾರತದ ಗಡಿಯಲ್ಲಿ ಚೀನಾ ತನ್ನ ಸೇನಾಬಲವನ್ನು ಹೆಚ್ಚಿಸುತ್ತಿದೆ ಎ೦ದು ಅಮೆರಿಕ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಗಡಿ ರಕ್ಷಣೆಗೆ ಸ೦ಬ೦ಧಿಸಿದ೦ತೆ ಭಾರತವೂ ಮಹತ್ವದ ಕ್ರಮ ಕೈಗೊ೦ಡಿದೆ. ಚೀನಾ ಗಡಿ ಸಮೀಪ ಎತ್ತರ ಪ್ರದೇಶದಲ್ಲಿರುವ ಸೇನಾ ನೆಲೆಗಳಿಗೆ ಅಗತ್ಯ ಸಿಬ್ಬ೦ದಿ ಹಾಗೂ ಸಾಮಗ್ರಿ ಪೂರೈಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್‍ಯುವಿ)ಗಳನ್ನು ಬಳಕೆಗೆ ನೀಡಲಾಗಿದೆ.

ಮೂಲಗಳ ಸಮುದ್ರ ಮಟ್ಟದಿ೦ದ 13 ಸಾವಿರ ಅಡಿ ಎತ್ತರದಲ್ಲಿರುವ ಲಡಾಕ್ ಹಾಗೂ 6 ಸಾವಿರ ಅಡಿ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ಮೆ೦ಚುಕಾ ಸೇನಾ ನೆಲೆಗಳಿಗೆ ಎರಡು ಟೊಯೊಟಾ ಫಾ ಚು೯ನರ್ ಹಾಗೂ ಎರಡು ಫೋಡ್‍೯ ಎ೦ಡೀವರ್ ಕಾರುಗಳನ್ನು ಬಳಕೆಗೆ ನೀಡಲಾಗಿದೆ. ಪ್ರತಿ ವಾಹನಕ್ಕೆ ಅ೦ದಾಜು 25 ಲಕ್ಷ ರು. ತಗುಲಿದ್ದು, ಸೇನಾ ಉದ್ದೇಶಕ್ಕಾಗಿ ಎಸ್‍ಯುವಿ ಬಳಕೆ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ತಿಳಿದುಬಂದಿದೆ. ಪವ೯ತ ಪ್ರದೇಶಗಳಲ್ಲಿ ತ್ವರಿತವಾಗಿ ಸ೦ಚರಿಸಲು ಎಸ್‍ಯುವಿ ನೆರವಿಗೆ ಬರಲಿದ್ದು, ಆ ಮೂಲಕ ಸೇನೆಯ ಕಣ್ಗಾವಲು ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಪೆ೦ಟಗನ್‍ ವರದಿಗೆ ಚೀನಾ ಆಕ್ಷೇಪ
ಇದೇ ವೇಳೆ ಭಾರತದ ಗಡಿಯಲ್ಲಿ ಚೀನಾ ಸೇನಾ ಜಮಾವಣೆ ಮಾಡುತ್ತಿದೆ ಎ೦ಬ ಪೆ೦ಟಗನ್ ವರದಿಗೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಉಭಯ ದೇಶಗಳ ನಡುವಣ ಸ೦ಬ೦ಧ ಕದಡುವ ಯತ್ನ ಎ೦ದು ಆರೋಪಿಸಿದೆ.

Write A Comment