ಮನೋರಂಜನೆ

ಬೆಂಗಳೂರು ಮ್ಯಾರಥಾನ್‌ಗೆ ಚಾಲನೆ ನೀಡಿದ ಮೈಕ್ ಪೊವೆಲ್; ಹೆಜ್ಜೆಹಾಕಿದ ನಟ ಪುನೀತ್ ರಾಜ್‌ಕುಮಾರ್

Pinterest LinkedIn Tumblr

punith

ಬೆಂಗಳೂರು: ಪ್ರತಿಷ್ಠಿತ ವಿಶ್ವ ೧೦ಕೆ ಬೆಂಗಳೂರು ಓಟದ ಒಂಬತ್ತನೆ ಆವೃತ್ತಿಗೆ ನಗರದಲ್ಲಿಂದು ಅಮೆರಿಕದ ಓಟಗಾರ ಮೈಕ್ ಪೊವೆಲ್ ಚಾಲನೆ ನೀಡಿದರು. ಕೀನ್ಯಾ, ಇಥಿಯೋಪಿಯಾ, ಉಗಾಂಡ ಸೇರಿದಂತೆ ಹಲವು ದೇಶಗಳ ಅಂತಾರಾಷ್ಟ್ರೀಯ ದೂರದ ಓಟಗಾರರು ಅಂತಾರಾಷ್ಟ್ರೀಯ ಎಲೈಟ್ ವಿಭಾಗದ ೧೦ಕೆ ಓಟದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಮೈಕ್ ಪೊವೆಲ್ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಆಟದ ರಾಯಭಾರಿಯಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಕೂಡ ಹೆಜ್ಜೆಹಾಕಿದರು.

ಭಾರತೀಯ ಪುರಷರ ವಿಭಾಗದಲ್ಲಿ ಲಕ್ಷ್ಮಣನ್ ಜಿ ಪ್ರಥಮ ಸ್ಥಾನ ಗಳಿಸಿದರೆ, ಸುರೇಶ್ ಪಟೇಲ್ ದ್ವಿತೀಯ ಸ್ಥಾನ ಪಡೆದರು. ಮತ್ತು ನಿತೇಂದ್ರ ಸಿಂಗ್ ರಾವತ್ ತೃತೀಯ ಸ್ಥಾನ ಪಡೆದಿದ್ದಾರೆ.

ಭಾರತೀಯ ಮಹಿಳೆಯರ ವಿಭಾಗದಲ್ಲಿ ಸ್ವಾತಿ ಗದಾವೆ ಪ್ರಥಮ, ಸಂಜೀವನಿ ಜಾದವ್ ದ್ವಿತೀಯ ಹಾಗೂ ಮೀನು ತೃತೀಯ ಸ್ಥಾನ ಪಡೆದಿದ್ದಾರೆ.

ಎಲೈಟ್ ವಿಭಾಗದಲ್ಲಿ ಇಥಿಯೋಪಿಯಾದ ಮೊಸಿನೆತ್ ಗೆರೆಮ್ಯೂ ಮೊದಲ ಸ್ಥಾನ, ಕೀನ್ಯಾದ ಜಾಂಗ್ ಲಾಂಗಾತ್ ಎರಡನೇ ಸ್ಥಾನ ಮತ್ತು ಇಥಿಯೋಪಿಯಾದ ಬೊನ್ಸ ದಿಡಾ ತೃತೀಯ ಸ್ಥಾನ ಪಡೆದಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಓಟ, ಕಸ್ತೂರಿ ಬಾ ರಸ್ತೆ, ಎಂ.ಜಿ. ರಸ್ತೆ, ಮತ್ತು ಕಬ್ಬನ್ ಪಾರ್ಕ್ ರಸ್ತೆಗಳಲ್ಲಿ ಸಾಗಿ ಅಂತಿಮವಾಗಿ ಕ್ರೀಡಾಂಗಣಕ್ಕೆ ಆಗಮಿಸಿತು. ಮಹಿಳೆಯರು, ಮಕ್ಕಳು ಸೇರಿದಂತೆ ಓಟದಲ್ಲಿ ಭಾಗವಹಿಸಿದ್ದರು.

ವೈದ್ಯಕೀಯ ವ್ಯವಸ್ಥೆ, ನೀರು, ಸಂಚಾರ ನಿಯಂತ್ರಣ ಸೇರಿದಂತೆ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ೯೦ ಅಧಿಕಾರಿಗಳನ್ನು ಕೂಟಕ್ಕೆ ನಿಯೋಜಿಸಿದ್ದು ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಣೆಯಿಂದ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ೧೫೦೦ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Write A Comment