ಕರ್ನಾಟಕ

ಗಾಂಜಾ ಮಾರಾಟ ಇಬ್ಬರ ಸೆರೆ

Pinterest LinkedIn Tumblr

ganja

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೧ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಜಗಜೀವನರಾಮನಗರದ ಮೊಹೀನ್‌ಪುರದ ಜಬೀ(೩೪)ಹಾಗೂ ಆಜಂಖಾನ್(೩೩)ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರು ಮೊಹೀನ್‌ಪುರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಿಂದ ೧ಕೆಜಿ ಗಾಂಜಾ,೩,೫೪೦ ರೂ ನಗದನ್ನು ವಶಪಡಿಸಿಕೊಂಡು ಜಗಜೀವನರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Write A Comment