ಮನೋರಂಜನೆ

ಪುಣೆ ಎದುರು ಗೆಲುವಿನ ಕೇಕೆ ಬೀರಿದ ಕೆಕೆಆರ್ !

Pinterest LinkedIn Tumblr

yusuf

ಕೋಲ್ಕತ್ತ: ಸಾಧಾರಣ ಗುರಿಯನ್ನು ಸುಲಭವಾಗಿ ಮುಟ್ಟಿದ ಕೋಲ್ಕತ್ತ ನೈಟ್‌ರೈಡರ್ಸ್ ತಂಡ ಪುಣೆ ರೈಸಿಂಗ್ ಸೂಪರ್‌ಜೈಂಟ್ಸ್ ಎದುರಿನ ಐಪಿಎಲ್‌ಪಂದ್ಯದಲ್ಲಿ ಡಕ್ವರ್ಥ್‌ಲೂಯಿಸ್‌ನಿಯಮದ ಪ್ರಕಾರ ಎಂಟು ವಿಕೆಟ್‌ಗಳ ಗೆಲುವು ಪಡೆಯಿತು.

ಈಡನ್ ಗಾರ್ಡನ್ಸ್‌ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ಜಯಿಸಿದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪುಣೆ ತಂಡ ಮೊದಲು ಬ್ಯಾಟ್‌ಮಾಡಿ 17.4 ಓವರ್‌ಗಳಲ್ಲಿ ಆರು ವಿಕೆಟ್‌ಕಳೆದುಕೊಂಡು 103 ರನ್ ಗಳಿಸಿತು. ಈ ವೇಳೆ ಮಳೆ ಸುರಿ ಕಾರಣ ಪುಣೆ ತಂಡದ ಇನಿಂಗ್ಸ್‌ಕೂಡ ಅಂತ್ಯಕಂಡಿತು. ಶನಿವಾರ ರಾತ್ರಿ 11.30ರ ಸುಮಾರಿಗೆ ಪಂದ್ಯ ಮತ್ತೆ ಆರಂಭವಾಯಿತು. ಆದ್ದರಿಂದ ಕೋಲ್ಕತ್ತ ತಂಡಕ್ಕೆ ಒಂಬತ್ತು ಓವರ್‌ಗಳಲ್ಲಿ 66 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಈ ಗುರಿಯನ್ನು ನೈಟ್‌ರೈಡರ್ಸ್ ಐದು ಓವರ್‌ಗಳಲ್ಲಿ ಎರಡು ವಿಕೆಟ್‌ಕಳೆದುಕೊಂಡು ತಲುಪಿತು.

ಬ್ಯಾಟಿಂಗ್ ವೈಫಲ್ಯ: ಈಗಾಗಲೇ ಪ್ಲೇ ಆಫ್‌ಪ್ರವೇಶದ ಸ್ಪರ್ಧೆಯಿಂದ ಹೊರಬಿದ್ದಿರುವ ಪುಣೆ ತಂಡ ಬ್ಯಾಟಿಂಗ್ ವೈಫಲ್ಯದಿಂದ ಪರದಾಡಿತು.

ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಅಜಿಂಕ್ಯ ರಹಾನೆ ಎರಡು ರನ್ ಗಳಿಸಿದರೆ, ಇರ್ಫಾಣ್‌ಪಠಾಣ್‌ಹೊಡೆದಿದ್ದು ಏಳು ರನ್ ಮಾತ್ರ.

ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ಪುಣೆ ತಂಡ ಸಾಕಷ್ಟು ಪರದಾಡಿತು. ಉಸ್ಮನ್‌ಕವಾಜಾ 17 ಎಸೆತಗಳಲ್ಲಿ ಮೂರು ಬೌಂಡರಿ ಸೇರಿದಂತೆ 21 ರನ್ ಗಳಿಸಿದ್ದರು. ಜಾರ್ಜ್ ಬೇಲಿ 27 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ಒಳಗೊಂಡಂತೆ 33 ರನ್ ಬಾರಿಸಿದ್ದರು. ಇದರಿಂದ ಪುಣೆ ತಂಡ ನೂರು ರನ್‌ಒಳಗೆ ಕುಸಿಯುವ ಅಪಾಯದಿಂದ ಪಾರಾಗಿತ್ತು.

ಆಸರೆ: ನೈಟ್ ರೈಡರ್ಸ್ ತಂಡಕ್ಕೂ ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಾಡಿತು. ನಂತರ ಮನೀಷ್‌ಪಾಂಡೆ (ಔಟಾಗದೆ 15) ಮತ್ತು ಯೂಸುಫ್‌ಪಠಾಣ್‌(ಔಟಾಗದೆ 37) ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಪುಣೆ ರೈಸಿಂಗ್ ಸೂಪರ್‌ಜೈಂಟ್ಸ್‌17.4 ಓವರ್‌ಗಳಲ್ಲಿ 6 ವಿಕೆಟ್‌ಗೆ 103. (ಉಸ್ಮನ್‌ಕವಾಜಾ 21, ಜಾರ್ಜ್ ಬೇಲಿ 33, ಸೌರಭ್‌ತಿವಾರಿ 13; ಆ್ಯಂಡ್ರೆ ರಸೆಲ್‌11ಕ್ಕೆ1, ಪಿಯೂಷ್‌ಚಾವ್ಲಾ 21ಕ್ಕೆ2)

ಕೋಲ್ಕತ್ತ ನೈಟ್‌ರೈಡರ್ಸ್‌್ 5 ಓವರ್‌ಗಳಲ್ಲಿ 2 ವಿಕೆಟ್‌ಗೆ 66. (ಮನೀಷ್‌ಪಾಂಡೆ ಔಟಾಗದೆ 15, ಯೂಸುಫ್‌ಪಠಾಣ್ ಔಟಾಗದೆ 37; ಆರ್‌. ಅಶ್ವಿನ್‌30ಕ್ಕೆ2.

ಫಲಿತಾಂಶ: ಕೋಲ್ಕತ್ತ ನೈಟ್‌ರೈಡರ್ಸ್ ತಂಡಕ್ಕೆ 8 ವಿಕೆಟ್‌ಜಯ.

Write A Comment