ಮನೋರಂಜನೆ

ಹಾಲಿ ಚಾಂಪಿ ಯನ್‌ಮುಂಬೈ ಇಂಡಿಯನ್ಸ್ ತಂಡ ವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್

Pinterest LinkedIn Tumblr

murali-vijay-wriddhiman-saha

ವಿಶಾಖಪಟ್ಟಣ : ಪ್ರತಿಭಾನ್ವಿತ ಮಧ್ಯಮ ವೇಗಿ ಮಾರ್ಕಸ್‌ಸ್ಟೊಯಿನಿಸ್‌(15ಕ್ಕೆ4) ಕರಾರುವಾಕ್ಕಾದ ಬೌಲಿಂಗ್‌ನಿಂದಾಗಿ ಕಿಂಗ್ಸ್‌ಇಲೆವೆನ್‌ಪಂಜಾಬ್ ತಂಡ ಐಪಿಎಲ್‌ಟೂರ್ನಿಯ ಶುಕ್ರ ವಾರದ ಪಂದ್ಯದಲ್ಲಿ ಹಾಲಿ ಚಾಂಪಿ ಯನ್‌ಮುಂಬೈ ಇಂಡಿಯನ್ಸ್ ತಂಡ ವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್‌ಗೆದ್ದ ಮುಂಬೈ ನಾಯಕ ರೋಹಿತ್‌ಶರ್ಮಾ ಬ್ಯಾಟಿಂಗ್‌ಮಾಡಲು ಮುಂದಾದರು. ದೊಡ್ಡ ಮೊತ್ತ ಗಳಿಸಲು ವಿಫಲವಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸಿದರು. ಪರಿಣಾಮ ಮುಂಬೈ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 124 ರನ್‌ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಗುರಿಯನ್ನು ಪಂಜಾಬ್ 17 ಓವರ್‌ಗಳಲ್ಲಿ ಮೂರು ವಿಕೆಟ್‌ಕಳೆದುಕೊಂಡು ತಲುಪಿತು.

ಆಘಾತ: ಹಾಲಿ ಚಾಂಪಿಯನ್ನರ ಆರಂಭ ಉತ್ತಮವಾಗಿರಲಿಲ್ಲ. ಪಾರ್ಥಿವ್‌ಪಟೇಲ್‌ಬದಲು ಹನ್ನೊಂದರ ಬಳಗದಲ್ಲಿ ಸ್ಥಾನ ಗಳಿಸಿದ್ದ ಉನ್ಮುಕ್ತ್‌ಚಾಂದ್‌ ಸೊನ್ನೆ ಸುತ್ತಿದರು. ಇದರ ಬೆನ್ನಲ್ಲೇ ಅಂಬಟಿ ರಾಯುಡು (0) ಕೂಡಾ ಪೆವಿಲಿಯನ್‌ಸೇರಿಕೊಂಡರು. ಈ ಎರಡು ವಿಕೆಟ್‌ಪತನವಾದಾಗ ತಂಡದ ಮೊತ್ತ 2.5 ಓವರ್‌ಗಳಲ್ಲಿ 8ರನ್‌ಆಗಿತ್ತು. ಉನ್ಮುಕ್ತ್‌ಮತ್ತು ರಾಯುಡು ವಿಕೆಟ್‌ಉರುಳಿಸಿದ ಸಂದೀಪ್‌ಶರ್ಮಾ ಮುಂಬೈ ಬ್ಯಾಟಿಂಗ್‌ಶಕ್ತಿಗೆ ದೊಡ್ಡ ಪೆಟ್ಟು ನೀಡಿದರು.

ಆ ಬಳಿಕ ನಾಯಕ ರೋಹಿತ್‌ಶರ್ಮಾ (15; 24ಎ, 1ಬೌಂ) ಮತ್ತು ನಿತಿಶ್‌ರಾಣಾ (25; 28ಎ, 3ಸಿ) ತಂಡಕ್ಕೆ ಆಸರೆಯಾಗುವ ಲಕ್ಷಣ ತೋರಿಸಿದ್ದರು.
ಕೆಳಕ್ರಮಾಂಕದಲ್ಲಿ ಕೀರನ್‌ಪೊಲಾರ್ಡ್‌(27), ಕೃಣಾಲ್‌ಪಾಂಡ್ಯ (19) ಮತ್ತು ಹರಭಜನ್‌ಸಿಂಗ್‌ (ಔಟಾಗದೆ 14) ದೊಡ್ಡ ಮೊತ್ತ ಗಳಿಸಲು ವಿಫಲರಾದ ಕಾರಣ ತಂಡ 130ರ ಗಡಿಯೊಳಗೆ ಕುಸಿಯಿತು.

ಅರ್ಧಶತಕ: ಸಾಧಾರಣ ಗುರಿಯನ್ನು ಕಿಂಗ್ಸ್‌ಇಲೆವೆನ್‌ಪಂಜಾಬ್ ತಂಡ ಸುಲಭವಾಗಿ ಮುಟ್ಟಲು ಕಾರಣವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ಮುರಳಿ ವಿಜಯ್‌ಮತ್ತು ವೃದ್ಧಿಮಾನ್‌ಸಹಾ ಅವರ ಅರ್ಧಶತಕದ ಬ್ಯಾಟಿಂಗ್. ಮುರಳಿ 52 ಎಸೆತಗಳಲ್ಲಿ 54 ರನ್ ಕಲೆ ಹಾಕಿದರೆ, ಸಹಾ 40 ಎಸೆತಗಳಲ್ಲಿ ಆರು ಬೌಂಡರಿ ಒಂದು ಸಿಕ್ಸರ್‌ಸೇರಿದಂತೆ 56 ರನ್ ಗಳಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 116 ರನ್‌ಕಲೆ ಹಾಕಿ ಗೆಲುವನ್ನು ಸುಲಭ ಮಾಡಿತು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 124 (ರೋಹಿತ್‌ಶರ್ಮಾ 15, ನಿತಿಶ್‌ರಾಣಾ 25, ಕೀರನ್‌ಪೊಲಾರ್ಡ್‌27, ಕೃಣಾಲ್‌ಪಾಂಡ್ಯ 19, ಹರಭಜನ್‌ಸಿಂಗ್‌ಔಟಾಗದೆ 14; ಸಂದೀಪ್‌ಶರ್ಮಾ 11ಕ್ಕೆ2, ಮೋಹಿತ್‌ಶರ್ಮಾ 26ಕ್ಕೆ2, ಮಾರ್ಕಸ್‌ಸ್ಟೊಯಿನಿಸ್‌15ಕ್ಕೆ2). ಕಿಂಗ್ಸ್‌ಇಲೆವೆನ್‌ಪಂಜಾಬ್‌17 ಓವರ್‌ಗಳಲ್ಲಿ 3 ವಿಕೆಟ್‌ಗೆ 127 (ಮುರಳಿ ವಿಜಯ್‌ಔಟಾಗದೆ 54, ವೃದ್ಧಿಮಾನ್‌ಸಹಾ 56; ಮಿಷೆಲ್‌ಮೆಕ್‌ಲಾಗನ್‌24ಕ್ಕೆ2).

ಫಲಿತಾಂಶ: ಕಿಂಗ್ಸ್‌ಇಲೆವೆನ್‌ಪಂಜಾಬ್ ತಂಡಕ್ಕೆ 7 ವಿಕೆಟ್‌ಜಯ. ಪಂದ್ಯ ಶ್ರೇಷ್ಠ: ಮಾರ್ಕಸ್‌ಸ್ಟೊಯಿನಿಸ್‌

Write A Comment