ಕರ್ನಾಟಕ

‘404’ ಈ ಚಿತ್ರ ಕೇವಲ ಸಾಫ್ಟ್​ವೇರ್ ಉದ್ಯೋಗಿಗಳೇ ಸೇರಿ ಮಾಡಿದ್ದು…ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆಇಎ ಅಡಿಟೋರಿಯಂನಲ್ಲಿ ಇಂದು ಬಿಡುಗಡೆ

Pinterest LinkedIn Tumblr

404 film

ಅವರ್ಯಾರೂ ನುರಿತ ನಟರಲ್ಲ, ತಂತ್ರಜ್ಞರೂ ಅಲ್ಲ. ಆದ್ರೂ, ಸಿನಿಮಾ ಮಾಡಿದ್ದಾರೆ. ಮಾಡುವುದಷ್ಟೇ ಅಲ್ಲ, ಅದನ್ನು ರಿಲೀಸ್ ಹಂತಕ್ಕೂ ತಂದಿದ್ದಾರೆ. ಆ ಚಿತ್ರದ ಹೆಸರು 404. ಇದು ಸಾಫ್ಟ್ವೇರ್ ಉದ್ಯೋಗಿಗಳೇ ಸೇರಿ ಮಾಡಿದ ಸಿನಿಮಾ. ಬರೀ ವೀಕೆಂಡ್ನಲ್ಲೇ ಶೂಟಿಂಗ್ ಮಾಡಿರುವುದು ವಿಶೇಷ.

ನಿರಂಜನ್ ಎಚ್.ಎಚ್. ಎಂಬುವರು ಇದರ ನಿರ್ದೇಶಕ. ಜತೆಗೆ ನಿರ್ವಪಕ, ನಟ, ಸ್ಕ್ರಿಪ್ಟ್ ಬರಹಗಾರ ಎಲ್ಲವೂ! 2 ಗಂಟೆ 40 ನಿಮಿಷಗಳ ಅವಧಿಯ ಈ ಚಿತ್ರಕ್ಕೆ ಖರ್ಚಾಗಿರುವುದು ಕೇವಲ 3.40 ಲಕ್ಷ ರೂ.ಗಳು ಮಾತ್ರವಂತೆ! ವೃತ್ತಿಪರ ಕ್ಯಾಮರಾ ಬಳಸದೆ, ತಂತ್ರಜ್ಞರ ಸಹಾಯ ಪಡೆಯದೆ ಮಾಡಿರುವ ಚಿತ್ರವಿದು. ಆ ಬ್ರಹ್ಮ ಕಿಸ್ಮತಿನ ಗೆರೆ ಎಳೆಯುವಾಗ ಎಡವಟ್ಟು ಮಾಡಿಬಿಟ್ರೆ ಏನೇನಾಗುತ್ತೆ? ಬೇಕಾದ್ದನ್ನು ಪಡೆದುಕೊಳ್ಳುವ ಹೋರಾಟದಲ್ಲಿ ತುತ್ತು ಕೈಗೆ ಬಂತು ಅನ್ನೋಷ್ಟರಲ್ಲಿ ಹೇಗೆ ಜಾರುತ್ತೆ? ಇಂಥ ದೈನಂದಿನ ಜೀವನದ ಸಾಮಾನ್ಯ ಸಂಗತಿಗಳಿಗೆ ಅಸಾಮಾನ್ಯ ಕಚಗುಳಿ ಇಡುತ್ತ ಹಾಸ್ಯ, ಸಸ್ಪೆನ್ಸ್, ಪ್ರೀತಿ ಎಂಬ ಉಪ್ಪು ಹುಳಿ ಖಾರಗಳ ಮಿಶ್ರಣ ಚಿತ್ರದಲ್ಲಿದೆಯಂತೆ. ಇಡೀ ಸಿನಿಮಾದಲ್ಲಿ ಎಲ್ಲೂ ಮೇಕಪ್ ಹಾಕ್ಕೊಳ್ಳದೆ ಕಲಾವಿದರು ಅಭಿನಯಿಸಿರುವುದು ವಿಶೇಷ.

ಗೂಗಲೇ ಗುರು!: ಸಿನಿಮಾಕ್ಕೆ ಬೇಕಾದ ತಂತ್ರಜ್ಞಾನ, ಕೌಶಲವನ್ನು ನಿರಂಜನ್ ಕಲಿತಿದ್ದು ಗೂಗಲ್ನಿಂದ. ಇವರು ಈ ಮುಂಚೆ ‘ಲೈಫಲ್ಲಿ ಏನಿದೆ ಬಿಡಿ?’ ಎಂಬ ಕಿರುಚಿತ್ರ ತಯಾರಿಸಿದ್ದರು. ಅದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕ ಸ್ಪಂದನೆಯೇ ಈ ಚಿತ್ರ ಮಾಡಲು ಸ್ಪೂರ್ತಿಯಂತೆ.

ಮೇ 14ಕ್ಕೆ ಬಿಡುಗಡೆ: ಇದೇ ಮೇ 14ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಕೆಇಎ ಅಡಿಟೋರಿಯಂನಲ್ಲಿ ‘404’ ಬಿಡುಗಡೆ. ಮೇ 21ರಂದು ಅಮೆರಿಕದಲ್ಲಿ ಚಿತ್ರ ತೆರೆ ಕಾಣಲಿದೆ. ಮುಖ್ಯ ಪಾತ್ರವರ್ಗದಲ್ಲಿ ನಿರಂಜನ್, ಶ್ರುತಿ ಹೀರಾ, ಪವನ್, ನಿತೀನ್ ಕೊರಳ್ಳಿ, ರಚನಾ ಇದ್ದಾರೆ.

Write A Comment