ರಾಷ್ಟ್ರೀಯ

ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಮೂವರ ಬಂಧನ

Pinterest LinkedIn Tumblr

rapeಅಥಣಿ, ಮೇ.13- ಗೃಹಿಣಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ ಮೂವರನ್ನು ಪೊಲೀಸರು ಬಂದಿಸಿದ ಘಟನೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ಸಿದ್ದಪ್ಪ ನಂದಗಾಂವ್(20), ಆಶೋಕ ನಂದಗಾಂವ್(23), ಹಾಗೂ ರಮೇಶ್ ನಂದಗಾಂವ್(24), ಎಂಬುವವರೇ ಬಂದಿತರಾಗಿದ್ದಾರೆ.

ಗೃಹಿಣಿಯು ಪತಿಯೊಂದಿಗೆ ಜಗಳವಾಡಿ ತವರು ಮನೆಗೆಂದು ಹೊರಟಾಗ ರಾತ್ರಿ ವೇಳೆ ಮೂವರು ಅವಳನ್ನು ತಡೆದು ಬಲವಂತವಾಗಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದರೆಂದು ಪೊಲೀಸರು ತಿಳಿಸಿದ್ದಾರೆ.

ಅಸ್ವಸ್ಥಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಸೇರಿಸಲಾಗಿದೆ. ಅಥಣಿ ಸಿಪಿಐ ರಾಜಶೇಖರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಆರೋಪಿಗಳನ್ನು ಬಂದಿಸಿ ಮುಂದಿನ ತನಿಖೆ ನಡೆಸಿದ್ದಾರೆ.

Write A Comment