ಮನೋರಂಜನೆ

ಧೂಮ್ ರಿಲೋಡೆಡ್‍ನಲ್ಲಿ ಸಲ್ಮಾನ್, ರಣ್‍ವೀರ್!?

Pinterest LinkedIn Tumblr

sallu-ranaveer

ಮುಂಬೈ: ಬಾಲಿವುಡ್‍ನಲ್ಲಿ ಧೂಮ್ ಚಿತ್ರ ಧೂಳೆಬ್ಬಿಸಲು ಮತ್ತೆ ತೆರೆಗೆ ಬರಲಿದೆ ಎನ್ನುವ ವಿಚಾರ ಯಶ್‍ರಾಜ್ ಫಿಲ್ಮ್ಸ್ ಕಳೆದ ಡಿಸೆಂಬರ್‍ನಲ್ಲೇ ತಿಳಿಸಿತ್ತು. ಇದೀಗ ಚಿತ್ರಕ್ಕೆ ಸಲ್ಮಾನ್ ಖಾನ್ ಹಾಗೂ ರಣ್‍ವೀರ್ ಸಿಂಗ್ ಅವರನ್ನು ಅಯ್ಕೆ ಮಾಡುವ ಕಸರತ್ತು ನಡೆಯುತ್ತಿದೆ ಎನ್ನುವ ಮಾತುಗಳು ಬಾಲಿವುಡ್‍ನಲ್ಲಿ ಕೇಳಿಬರುತ್ತಿದೆ.

ಹೌದು. ಸಲ್ಮಾನ್ ಖಾನ್ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಯಶ್ ರಾಜ್ ಬ್ಯಾನರ್‍ನಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಧೂಮ್ ರಿಲೋಡೆಡ್ ಚಿತ್ರವನ್ನು ಸಲ್ಮಾನ್ ಹಾಗೂ ರಣ್‍ವೀರ್ ಕಾಂಬಿನೇಶನ್‍ನಲ್ಲಿ ತರಲು ನಿರ್ದೇಶಕ ಆದಿತ್ಯ ಚೋಪ್ರಾ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಧೂಮ್ ಚಿತ್ರ 3 ಅವತರಿಣಿಕೆಯಲ್ಲಿ ತೆರೆ ಮೇಲೆ ಬಂದು ಕೋಟಿ ಕೋಟಿ ರೂ. ಬಾಚಿಕೊಂಡಿದೆ. ಇದೀಗ ನಾಲ್ಕನೇ ಅವತರಿಣಿಕೆಗೆ ಸಿದ್ಧತೆ ನಡೆಸಿರುವ ಈ ಚಿತ್ರದ ನೆಗೇಟಿವ್ ರೋಲ್‍ಗೆ ಸಲ್ಮಾನ್ ಅವರಿಗೆ ಆಫರ್ ನೀಡಲಾಗಿದೆ ಎನ್ನಲಾಗಿದೆ. ಇನ್ನುಳಿದಂತೆ ಅಭಿಷೇಕ್ ಪಾತ್ರದ ಪೊಲೀಸ್ ರೋಲ್‍ನಲ್ಲಿ ಆಕ್ಟ್ ಮಾಡಲು ರಣ್‍ವೀರ್ ಅವರಿಗೆ ಆಫರ್ ನೀಡಲಾಗಿದೆಯಂತೆ. ಆದ್ರೆ ಈ ಸ್ಟಾರ್ ನಟರು ಧೂಮ್ ಚಿತ್ರದಲ್ಲಿ ನಟಿಸ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

Write A Comment