ಮನೋರಂಜನೆ

‘ಡಿವೈನ್ ಲವರ್ಸ್’ನಲ್ಲಿ ಕಂಗನಾ ಬದಲಿಗೆ ಜರೀನ್

Pinterest LinkedIn Tumblr

zareen-replaces-kangana-in-divine-lovers

ಮುಂಬೈ: ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ನಟ ಇರ್ಫಾನ್ ಖಾನ್ ಎದುರು ‘ಡಿವೈನ್ ಲವರ್ಸ್’ ಸಿನೆಮಾದಲ್ಲಿ ನಟಿಸಲು ನಟಿ ಜರೀನ್ ಖಾನ್ ಅವರು ಆಯ್ಕೆಯಾಗಿದ್ದಾರೆ. ಸಾಯಿ ಕಬೀರ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸಲು ಮೊದಲು ರಾಷ್ಟ್ರ ಪ್ರಶಸ್ತಿ ವಿಜೇತ ಕಂಗನಾ ರಣಾವತ್ ಅವರಿಗೆ ಕೇಳಲಾಗಿತ್ತು.

ಈ ವಿಷಯವನ್ನು ಧೃಢೀಕರಿಸಿರುವ ಕಬೀರ್ “ಹೌದು ಇದು ನಿಜ. ಪಠಾನಿ ನೋಟ ಹೊಂದಿರುವ ನಟಿ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಾರೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇರ್ಫಾನ್ ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಕಂಗನಾ ಎದುರುನೋಡುತ್ತಿದ್ದರು ಆದರೆ ದಿನಾಂಕಗಳು ಹೊಂದಾಣಿಕೆಯಾಗದ ಕಾರಣ ಸಿನೆಮಾ ಚಿತ್ರೀಕರಣ ಮುಂದುವರೆಯಲಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಶಾಲ್ ಪಾಂಡ್ಯ ನಿರ್ದೇಶನದ ‘ಹೇಟ್ ಸ್ಟೋರಿ-೩’ರಲ್ಲಿ ಕಾಣಿಸಿಕೊಂಡಿದ್ದ ಜರೀನ್ ಈಗ ಎರಡು ತಿಂಗಳ ತರಬೇತಿಯಲ್ಲಿ ಭಾಗಿಯಾಗಲಿದ್ದಾರಂತೆ. ಈ ಸಿನೆಮಾ ಸಾಹಸಮಯ ಹಾಸ್ಯಚಿತ್ರವಾಗಿದ್ದು ಸೆಪ್ಟಂಬರ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

Write A Comment