ಕನ್ನಡ ವಾರ್ತೆಗಳು

ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕುಂದಾಪುರದ ನಿವ್ಯಾ ಪಿ. ಶೆಟ್ಟಿಗೆ 274ನೇ ರ್‍ಯಾಂಕ್‌

Pinterest LinkedIn Tumblr

ಕುಂದಾಪುರ: ಮಂಗಳವಾರ ಪ್ರಕಟವಾದ ಕೇಂದ್ರ ಲೋಕಸೇವಾ ಆಯೋಗದ 2015 ಸಾಲಿನ ಫಲಿತಾಂಶದಲ್ಲಿ ಕುಂದಾಪುರ ಮೂಲದ ನಿವ್ಯಾ ಪಿ. ಶೆಟ್ಟಿ 274ನೇ ರ್‍ಯಾಂಕ್‌ ಗಳಿಸಿ ಐಪಿಎಸ್‌ ಹುದ್ದೆಗೆ ಆಯ್ಕೆ ಆಗಿದ್ದಾರೆ.

Kundapura_UPSC_Nivya shetty

ಕುಂದಾಪುರ ತಾಲೂಕಿನ ತೊಂಭಟ್ಟು ಮಾಜಿ ಪಟೇಲ್‌ ಸದಾಶಿವ ಶೆಟ್ಟಿ ಅವರ ಪುತ್ರ ಮಾಜಿ ಸರಕಾರಿ ಅಭಿಯೋಜಕ ಪ್ರಕಾಶ್‌ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ.

ಮುಂದಿನ ದಿನದಲ್ಲಿ ಜನಸೇವೆ ಹಾಗೂ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ತಂದೆ-ತಾಯಿ ಹಾಗೂ ಮನೆಯವರ ಪ್ರೋತ್ಸಾಹ ನನ್ನ ಸಾಧನೆಗೆ ಪ್ರೇರಣೆಯಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

Write A Comment