ರಾಷ್ಟ್ರೀಯ

ರಾಹುಲ್‌ಗೆ ಅನಾರೋಗ್ಯ: ದಕ್ಷಿಣ ರಾಜ್ಯಗಳ ಭೇಟಿ ರದ್ದು

Pinterest LinkedIn Tumblr

rahulನವದೆಹಲಿ(ಪಿಟಿಐ): ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಅನಾರೋಗ್ಯ ನಿಮಿತ್ತ ದಕ್ಷಿಣ ಭಾರತದ ಪುದುಚೆರಿ ಹಾಗೂ ತಮಿಳುನಾಡು, ಕೇರಳ ರಾಜ್ಯಗಳ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇಂದು ಪುದುಚೆರಿಯಿಂದ ಚುನಾವಣಾ ಪ್ರಚಾರ ಆರಂಭವಾಗಬೇಕಿತ್ತು.
‘ದುರಾದೃಷ್ಟವಶಾತ್ ನನಗೆ ಭಾನುವಾರ ರಾತ್ರಿಯಿಂದ ತುಂಬಾ ಜ್ವರ ಬಂದಿದ್ದು, ವೈದ್ಯರು ಮುಂದಿನ ಎರಡು ದಿನ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ’ ಎಂದು ರಾಹುಲ್ ಅವರು ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.
ನಿಗದಿಯಂತೆ ಮೇ 10 ಮತ್ತು 11ರಂದು ಪುದುಚೆರಿ, ತಮಿಳುನಾಡು ಮತ್ತು ಕೇರಳದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಾನು ಜನರ ಕ್ಷಮೆಯಾಚಿಸುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಹಾಗೂ ಕೇಂದ್ರ ಮಾಜಿ ಸಚಿವ ವಿ. ನಾರಾಯಣಸ್ವಾಮಿ ಅವರನ್ನು ಚುನಾವಣಾ ಪ್ರಚಾರ ವೇಳೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ ಅನಾಮದೇಯ ಪತ್ರವೊಂದು ಬಂದಿದ್ದು, ಕಾಂಗ್ರೆಸ್ ಮುಖಂಡರು ಹೆಚ್ಚಿನ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

Write A Comment