ಕರ್ನಾಟಕ

ಗೋಡೆ ಕೊರೆದು ಚಿನ್ನಾಭರಣ ದರೋಡೆ

Pinterest LinkedIn Tumblr

goldಬೆಂಗಳೂರು, ಮೇ.೧೦-ಚಿನ್ನಾಭರಣ ಅಂಗಡಿಯೊಂದರ ಗೋಡೆ ಕೊರೆದು ಒಳನುಗ್ಗಿರುವ ದುಷ್ಕರ್ಮಿಗಳು ೧ ಕೆ.ಜಿ ಚಿನ್ನ,೨ ಕೆ.ಜಿ. ಬೆಳ್ಳಿ ಸೇರಿ ಲಕ್ಷಾಂತರ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ನಿನ್ನೆ ರಾತ್ರಿ ರಾಜಗೋಪಾಲನಗರದಲ್ಲಿ ನಡೆದಿದೆ.
ರಾಜಗೋಪಾಲನಗರದ ಲಗ್ಗೆರೆಯಲ್ಲಿರುವ ಮಹಾಲಕ್ಷ್ಮಿ ಜುವೆಲ್ಲರಿಗೆ ರಾತ್ರಿ ೨ ಗಂಟೆ ಸುಮಾರಿಗೆ ಹಿಂಬದಿಯಿಂದ ಗೋಡೆ ಕೊರೆದು ಒಳನುಗ್ಗಿರುವ ಮೂವರು ದುಷ್ಕರ್ಮಿಗಳು ಅಂಗಡಿಯಲ್ಲಿ ಮಲಗಿದ್ದ ಮಾಲೀಕ ಚೆನ್ನಾರಾಂ ಅವರನ್ನು ಬೆದರಿಸಿ ನಾಲ್ಕು ಸೆಲ್ಫ್‌ಗಳಲ್ಲಿ ಚಿನ್ನ ಬೆಳ್ಳಿ ಆಭರಣಗಳಲ್ಲಿ ಒಂದು ಸೆಲ್ಫ್‌ನಲ್ಲಿದ್ದ ಆಭರಣಗಳನ್ನು ಮಾತ್ರ ದೋಚಿ ಪರಾರಿಯಾಗಿದ್ದಾರೆ.
ಅಂಗಡಿ ಟ್ರಜರಿಯಿರುವ ಕಡೆಯೇ ಕನ್ನ ಕೊರೆಯಲಾಗಿದ್ದು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರ ಹಾಗೂ ದೃಶ್ಯಗಳನ್ನು ದಾಖಲಿಸಿರುವ ಡಿವಿಆರ್‌ನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮಾಲೀಕ ಚೆನ್ನಾರಾಂ ಅವರು ರಾಜಗೋಪಾಲ ನಗರ ಪೊಲೀಸರಿಗೆ ದೂರು ನೀಡಿ ಮಧ್ಯರಾತ್ರಿ ಕನ್ನ ಕೊರೆದು ಒಳನುಗ್ಗಿದ ಮೂವರು ದುಷ್ಕರ್ಮಿಗಳು ಕೃತ್ಯ ನಡೆಸಿದ್ದು ಅವರೆಲ್ಲರೂ ಮಾರವಾಡಿ ಭಾಷೆಯಲ್ಲಿ ಮಾತನಾಡುತ್ತಿದ್ದು ಸುಮಾರು ೨೫ರಿಂದ ೩೦ ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾಲ್ಕು ಸೆಲ್ಫ್‌ಗಳಲ್ಲಿ ಚಿನ್ನ ಬೆಳ್ಳಿ ಆಭರಣಗಳಲ್ಲಿ ಒಂದು ಸೆಲ್ಫ್‌ನಲ್ಲಿದ್ದ ಆಭರಣಗಳನ್ನು ಮಾತ್ರ ಏಕೆ ದೋಚಿದ್ದಾರೆ ಹಾಗೂ ಟ್ರಜರಿ ಒಡೆಯಲಿಲ್ಲವೇ ಎನ್ನುವ ಪ್ರಶ್ನೆಗೆ ಅಸ್ಪಷ್ಟ ಉತ್ತರ ನೀಡಿದ್ದು ಚೆನ್ನಾರಾಂ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಟಿ.ಆರ್.ಸುರೇಶ್ ಅವರು ತಿಳಿಸಿದ್ದಾರೆ.
ರಾಜಸ್ಥಾನ ಮೂಲದವರಾದ ಚೆನ್ನಾರಾಂ ಹಲವು ವರ್ಷಗಳಿಂದ ಲಗ್ಗೆರೆಯಲ್ಲಿ ಮಹಾಲಕ್ಷ್ಮಿ ಜುವೆಲ್ಲರಿಗೆ ಅಂಗಡಿ ನಡೆಸುತ್ತಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment