ರಾಷ್ಟ್ರೀಯ

ಯುಪಿಯಲ್ಲಿ ಪೋಸ್ಟರ್ ವಾರ್ ! ಹುಲಿ ಮೇಲೆ ಯೋಗಿ ಆದಿತ್ಯನಾಥ್, ಕತ್ತೆ ಮೇಲೆ ರಾಹುಲ್ ಗಾಂಧಿ

Pinterest LinkedIn Tumblr

Yogi-poster_6

ಗೋರಕ್ ಪುರ: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೋಸ್ಟರ್ ವಾರ್ ಗೆ ಅಂತ್ಯವಿಲ್ಲದಂತಾಗಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪರಸ್ಪರ ಪೋಸ್ಟರ್ ಯುದ್ದ ಮುಂದುವರಿಸಿದ್ದಾರೆ.

ಬಿಜೆಪಿ ಸಂಸದ ಯೋಗಿ ಆದಿತ್ಯ ನಾಥ್ ಹುಲಿಯ ಮೇಲೆ ಕುಳಿತಿರುವಂತೆ, ಉತ್ತರ ಪ್ರದೇಶ ಮುಖ್ಯಮಂತ್ರಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಅಸಾದುದ್ದೀನ್ ಓವೈಸಿ ಮತ್ತು ಮಾಯಾವತಿ ಕತ್ತೆಯ ಮೇಲೆ ಕುಳಿತಿರುವಂತೆ ಉತ್ತರ ಪ್ರದೇಶ ಬಿಜೆಪಿ ಅಲ್ಪ ಸಂಖ್ಯಾತ ಘಟಕ ಪೋಸ್ಟರ್ ಗಳನ್ನು ಎಲ್ಲೆಡೆ ಅಂಟಿಸಿದೆ.

ಇನ್ನೂ ಪೋಸ್ಟರ್ ಮೇಲೆ ಅಬ್ ಕಿ ಬಾರ್ ಯೋಗಿ ಸರ್ಕಾರ್ ಎಂಬ ವಾಕ್ಯಗಳನ್ನು ಬರೆಯಲಾಗಿದೆ. ಕಾಂಗ್ರೆಸ್ ಘಟಕ ರಾಹುಲ್ ಗಾಂಧಿಯನ್ನು ಸಿಂಗಂ ರೀತಿ ಚಿತ್ರಿಸಿ ಅಂಟಿಸಿದ ನಂತರ ಬಿಜೆಪಿ ಈ ರೀತಿಯ ಪೋಸ್ಟರ್ ಚಿತ್ರಿಸಿದೆ.

2017 ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಯೋಗಿ ಆದಿತ್ಯನಾಥ್ ಸಿಎಂ ಆಗುತ್ತಾರೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಇರ್ಫಾನ್ ಅಹ್ಮದ್ ಹೇಳಿದ್ದಾರೆ.

Write A Comment