ಮನೋರಂಜನೆ

ಯುವಿಗೆ ದೇವರಾದರೇ ಸಚಿನ್…! ಸಚಿನ್ ಕಾಲಿಗೆ ಬಿದ್ದ ಯುವರಾಜ್ ಸಿಂಗ್

Pinterest LinkedIn Tumblr

yuvraj-singh-sachin

ವೈಜಾಗ್ (ಹೈದ್ರಾಬಾದ್): ಟ್ವೆಂಟಿ-20 ಗೇಮ್ ಚೇಂಜರ್ ಎಂದೇ ಬಿಂಬಿಸಿಕೊಂಡಿರುವ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್‌ಸಿಂಗ್‌ಗೇ ಕ್ರಿಕೆಟ್ ಮಾಂತ್ರಿಕ ಸಚಿನ್‌ತೆಂಡೂಲ್ಕರ್ ದೇವರಾದರೆ…! ಈ ರೀತಿಯ ಅನುಮಾನ ಇತ್ತೀಚೆಗೆ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ. ಹಿಂದೂ ಸಂಪ್ರದಾಯದ ಪ್ರಕಾರ ನಾವು ದೇವರನ್ನು ಕಂಡರೆ ಕೈ ಮುಗಿದು, ಕಾಲಿಗೆ ಬಿದ್ದು ನಮ್ಮ ಇಷ್ಟಾರ್ಥವನ್ನು ನಿವೇದನೆ ಮಾಡಿಕೊಳ್ಳುತ್ತೇವೆ. ಸಚಿನ್ ತೆಂಡೂಲ್ಕರ್ ಅವರನ್ನು ಕೂಡ ಕ್ರಿಕೆಟ್‌ನ ದೇವರೆಂದೇ ಕೋಟಾನುಕೋಟಿ ಅಭಿಮಾನಿಗಳು ಬಿಂಬಿಸಿದ್ದಾರೆ.

ಇದಕ್ಕೆ ಇಂಬು ಕೊಡುವಂತೆ ಯುವರಾಜ್‌ಸಿಂಗ್ 2014ರ ಚುಟುಕು ವಿಶ್ವಕಪ್‌ನ ನಂತರ ಸ್ಥಾನ ಕಳೆದುಕೊಂಡ ನಂತರ ಸಚಿನ್ ತೆಂಡೂಲ್ಕರ್‌ರನ್ನು ಆದರ್ಶವಾಗಿ ಇಟ್ಟುಕೊಂಡಿರುವುದರ ಜೊತೆಗೆ ಅವರ ಬಗ್ಗೆ ಪೂಜನೀಯ ಭಾವನೆಯನ್ನು ಮೂಡಿಸಿಕೊಂಡಿದ್ದಾರೆ. ಜುಲೈ 2014ರಂದು ಮೆಲ್ಬೋನ್‌ನಲ್ಲಿ ಲರ್ಡ್ಸ್ ಕ್ರಿಕೆಟ್ ಕ್ಲಬ್‌ಗೆ 100 ವರ್ಷಗಳ ಸಂಭ್ರಮ ಕಂಡ ಹಿನ್ನೆಲೆಯಲ್ಲಿ ವಿಶ್ವ ಶ್ರೇಷ್ಠ ತಂಡ ಹಾಗೂ ಮಾರ್ನೆಿಬೋನ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ತಂಡದ ಪರ ಆಡಿ ಶತಕ ( 132 ರನ್) ಗಳಿಸಿದ ಯುವಿ, ಸಚಿನ್ ತೆಂಡೂಲ್ಕರ್‌ರ ಬೌಲಿಂಗ್ ಔಟಾದ ಬಳಿಕ ಸಚಿನ್‌ರ ಪಾದಕ್ಕೆ ಎರಗುವ ಮೂಲಕ ಆಶ್ಚರ್ಯ ಮೂಡಿಸಿದ್ದರು.

ಈಗ ಮತ್ತೆ ನಿನ್ನೆ ಸನ್ ರೈಸರ್ಸ್ ತಂಡದ ಪರ ಆಡಿದ ಯುವಿ 23 ಎಸೆತಗಳಲ್ಲಿ 39 ರನ್‌ಗಳನ್ನು ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ಕಾರಣವಾಗಿದ್ದ ರು. ಯುವರಾಜ್‌ಸಿಂಗ್ ಪಂದ್ಯ ಮುಗಿದ ನಂತರ ಮತ್ತೆ ಸಚಿನ್ ತೆಂಡೂಲ್ಕರ್‌ರ ಪಾದ ಮುಟ್ಟಿ ಆಶೀರ್ವಾದ ಪಡೆದಿರುವುದು ಮೈದಾನದಲ್ಲಿ ನೆರೆದಿದ್ದ ಎಲ್ಲರನ್ನು ಚಕಿತಗೊಳಿಸಿದೆ. ಅಂದ ಹಾಗೆ ನಿನ್ನೆಯ ಪಂದ್ಯವು ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್‌ಸಿಂಗ್ ಐಪಿಎಲ್ ಆಡಿದ 100ನೇ ಪಂದ್ಯವಾಗಿದೆ.

Write A Comment