ಕರ್ನಾಟಕ

ಮೆಟ್ರೊ ಸುರಂಗ ಸಂಚಾರಕ್ಕೆ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ : 1 ವಾರದಲ್ಲಿ 4 ಕೋಟಿ ಆದಾಯ

Pinterest LinkedIn Tumblr

Metro train  at Bypanhalli Metro station during a press preview in Bangalore .......

ಬೆಂಗಳೂರು: ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗಕ್ಕೆ ಪ್ರಯಾಣಿಕರಿಂದ ಭರ್ಜರಿ ಪ್ರತಿಕ್ರಿಯೆ ಬರುತ್ತಿದ್ದು, ಒಂದೇ ವಾರದಲ್ಲಿ ಬಿಎಂಆರ್ ಸಿಎಲ್ ಗೆ ಬರೊಬ್ಬರಿ 4 ಕೋಟಿ ರುಪಾಯಿ ಆದಾಯ ಬಂದಿದೆ.

ಹೌದು, ಮೆಟ್ರೊ ಸುರಂಗ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಪರಿಣಾಮ ಕಳೆದು ಒಂದು ವಾರದಲ್ಲಿ ಮೆಟ್ರೊಗೆ 4 ಕೋಟಿ ರುಪಾಯಿಗೆ ಆದಾಯ ಬಂದಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶ ಪ್ರದೀಪ್‌ ಸಿಂಗ್‌ ಖರೋಲಾ ಅವರು ಸೋಮವಾರ ಹೇಳಿದ್ದಾರೆ.

ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಸಂಪೂರ್ಣ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಪ್ರತಿ ನಿತ್ಯ 1.45 ಲಕ್ಷ ಜನ ಸಂಚರಿಸುತ್ತಿದ್ದಾರೆ ಎಂದು ಖರೋಲಾ ಅವರು ತಿಳಿಸಿದ್ದಾರೆ.

ಒಟ್ಟು 18.2 ಕಿ.ಮೀ.ಗೆ ಪ್ರಯಾಣಕ್ಕೆ 40 ರುಪಾಯಿ ನಿಗದಿ ಮಾಡಲಾಗಿದ್ದು, ಟೋಕನ್‌ ಬದಲು ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಿದರೆ ಶೇ. 15ರಷ್ಟು ರಿಯಾಯಿತಿ ದೊರೆಯುತ್ತಿದೆ. ಬಿಎಂಟಿಸಿ ಸಾಮಾನ್ಯ ಬಸ್‌ನಲ್ಲಿ ಇಷ್ಟು ಉದ್ದದ ಪ್ರಯಾಣಕ್ಕೆ 44 ರುಪಾಯಿ ಪಾವತಿಸಬೇಕಾಗುತ್ತದೆ. ಸಮಯ ಮತ್ತು ಹಣ ಉಳಿತಾಯದ ದೃಷ್ಟಿಯಿಂದಲೂ ಮೆಟ್ರೊ ಪ್ರಯಾಣ ಉತ್ತಮ ಎಂಬ ಕಾರಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ.

Write A Comment