ಮನೋರಂಜನೆ

ಸೈಫ್ ಪುತ್ರಿ ಜೊತೆ ಮಾಜಿ ಕೇಂದ್ರ ಸಚಿವರ ಮೊಮ್ಮಗ ಡೇಟಿಂಗ್!

Pinterest LinkedIn Tumblr

sara-and-veer_xnaem

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಕ್ಕಳ ಬಗ್ಗೆ ಸಿಕ್ಕಾಪಟ್ಟೆ ಕೇರ್ ತಗೋತಾರೆ. ಅದರಲ್ಲೂ ಪುತ್ರಿ ಸಾರಾ ಬಗ್ಗೆ ತುಂಬಾನೆ ಕಾಳಜಿ ವಹಿಸ್ತಾರೆ ಎನ್ನೋದನ್ನ ಕೇಳಿದ್ವಿ. ಆದ್ರೆ ಈಗ ಪುತ್ರಿ ಸಾರಾ ಬಾಲಿವುಡ್‍ಗೆ ಎಂಟ್ರಿ ನೀಡ್ತಿದ್ದು ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಡಿದೆ.

ಹೌದು. ಮೂಲಗಳ ಪ್ರಕಾರ ಸೈಫ್ ಪುತ್ರಿ ಸಾರಾ, ವೀರ್ ಪಹರಿಯಾ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡಿದ್ದಾಳೆ. ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗನಾಗಿರುವ ವೀರ್ ಜೊತೆಗೆ ಇತ್ತೀಚೆಗೆ ಹಲವಾರು ಬಾರಿ ಸಾರಾ ಕಾಣಿಸಿಕೊಂಡಿರುವುದು ಈ ಸುದ್ದಿ ಹಬ್ಬಲು ಕಾರಣವಾಗಿದೆ.

ಇಷ್ಟಲ್ಲದೇ ಸಾರಾ ವೀರ್ ಇತ್ತೀಚಿಗಷ್ಟೇ ಭೇಟಿಯಾಗಿರುವುದು ಎಂದು ಹೇಳಲಾಗುತ್ತಿದ್ದು, ಇವರಿಬ್ಬರು ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Write A Comment