
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಇಬ್ಬರು ದೇಶದ ಅತ್ಯಂತ ಪ್ರಸಿದ್ದ ವ್ಯಕ್ತಿಗಳಾಗಿದ್ದಾರೆ. ಮೋದಿ ಭಾರತದ ಅತಿ ಪ್ರೀತಿ ಪಾತ್ರ ರಾಜಕಾರಣಿಯಾಗುತ್ತಿದ್ದರೆ, ಕೊಹ್ಲಿ ಕೂಡ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಹೊಂದುತ್ತಿದ್ದಾರೆ.
ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೊಹ್ಲಿ ಟ್ವೀಟರ್ ನಲ್ಲಿ ಶುಭಾಶಯ ಕೋರಿದ್ದರು. ಇದಾದ ನಂತರ ಕೊಹ್ಲಿ ಕೂಡ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಜನಪ್ರಿಯರಾದರು.
ಇಬ್ಬರು ಕೂಡ ಇಲ್ಲಿಯವರೆಗೂ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭೇಟಿಯಾಗಿಲ್ಲ. ಮೋದಿ ಬಗ್ಗೆ ಹೇಳಿ ಎಂದು ವಿರಾಟ್ ಕೊಹ್ಲಿ ಅವರನ್ನು ಖಾಸಗಿ ಚಾನಲ್ ವೊಂದು ಕೇಳಿದ್ದಕ್ಕೆ ಕೊಹ್ಲಿ ಹೇಳಿದ್ದು ಅವರೊಬ್ಬ ಆತ್ಮ ನಂಬಿಕೆಯ ವ್ಯಕ್ತಿ ಎಂದು ಹೇಳಿದ್ದಾರೆ.
ನನಗೂ ಕೂಡ ನನ್ನ ಕ್ರಿಕೆಟ್ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇದ್ದು, ಅದರಿಂದ ನನಗೆ ಒಳ್ಳೆಯ ಆಟವಾಡಲು ಸಾಧ್ಯವಾಗುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.