ಮನೋರಂಜನೆ

ಡೆಲ್ಲಿ ವಿರುದ್ಧ ಇಂದು ಧೋನಿ ಪಡೆಗೆ ಮಾಡು ಇಲ್ಲವೆ ಮಡಿ ಪಂದ್ಯ

Pinterest LinkedIn Tumblr

dhoni-stephen

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದ್ದ ಎಂಎಸ್ ಧೋನಿ ಇದೀಗ ಪುಣೆ ತಂಡದ ನಾಯಕನಾಗಿದ್ದು ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಇಂದು ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಎದುರಿಸಲಿದ್ದು, ಪುಣೆಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಸತತ ಗೆಲುವಿನ ಹುಮ್ಮಸ್ಸಿನಲ್ಲಿರುವ ಜಹೀರ್ ಖಾನ್ ನಾಯಕತ್ವದ ಡೆಲ್ಲಿ ತಂಡ ಪುಣೆ ವಿರುದ್ಧ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಐಪಿಎಲ್ ನಲ್ಲಿ ಪುಣೆ ಇದುವರೆಗೂ ಆಡಿರುವ 8 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಷ್ಟೇ ಗೆದ್ದಿದ್ದು, ಲೀಗ್ ಹಂತದಲ್ಲಿ ಉಳಿದಿರುವ ಆರು ಪಂದ್ಯಗಳಲ್ಲಿ ಗೆದ್ದರಷ್ಟೇ ಫ್ಲೇ-ಆಫ್ ಆಸೆ ಜೀವಂತವಾಗಿರಲಿದೆ.

Write A Comment