ಮನೋರಂಜನೆ

ಐಪಿಎಲ್‌ನಲ್ಲಿ ಈ ಐವರು ಆಟಗಾರರ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ… !

Pinterest LinkedIn Tumblr

cricketers

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ವಿಶ್ವ ದಾಖಲೆಗಳು ಸೃಷ್ಠಿಯಾಗುತ್ತಿವೆ. ಅದರಂತೆ ಬ್ಯಾಟಿಂಗ್ ಗೆ ಹೆಚ್ಚು ಪ್ರಾಮುಖ್ಯತೆ ಇರುವ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ ಇಂತಿದೆ.

ಕ್ವಿಂಟನ್ ಡಿಕಾಕ್
ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್ ಸದ್ಯ ಡೆಲ್ಲಿ ಡೇರ್ ಡೇವಿಲ್ಸ್ ಪರ ಆಡುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ತಂಡಕ್ಕೆ ಭರ್ಜರಿ 192 ರನ್ ಗಳ ಗುರಿ ನೀಡಿತ್ತು. ಈ ವೇಳೆ ತಂಡದ ಪರ ಆಡಿದ ಕ್ವಿಂಟನ್ ಡಿಕಾಕ್ 48 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಜಯ ಗಳಿಸಿ ಕೊಟ್ಟರು. ಇದು ಡಿಕಾಕ್ ವೃತ್ತಿ ಜೀವನದ ಸಾಧನೆಯಾಗಿದೆ. ಅಲ್ಲದೆ ತಂಡ ಸಹ ಅತಿ ಹೆಚ್ಚು ರನ್ ಚೇಸ್ ಮಾಡಿದ ಗರಿಮೆ ಪಡೆದಿದೆ.

ಕ್ರಿಸ್ ಮೊರಿಸ್
ಐಪಿಎಲ್ 9ನೇ ಆವೃತ್ತಿಯ ಬಿಡ್ ನಲ್ಲಿ ಮಿಲಿಯನ್ ಡಾಲರ್ ಗೆ ಸೇಲಾಗಿರುವ ಆಲ್ ರೌಂಡರ್ ಆಟಗಾರ ಕ್ರಿಸ್ ಮೋರಿಸ್ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಬ್ರೆಂಡನ್ ಮೆಕ್ಕಲಮ್ ಹಾಗೂ ಸುರೇಶ್ ರೈನಾರ ವಿಕೆಟ್ ಪಡೆದಿದ್ದ ಮೋರಿಸ್ ಅವರು ಬ್ಯಾಟಿಂಗ್ ನಲ್ಲೂ ಗುಜರಾತ್ ಲಯನ್ಸ್ ಬೌಲರ್ ಗಳ ಬೇಟೆಯಾಡಿದ್ದರು. ಡೆಲ್ಲಿ ತಂಡದ ಗೆಲುವಿಗೆ 56 ಎಸೆತಗಳಲ್ಲಿ 116 ರನ್ ಗಳ ಅವಶ್ಯಕತೆ ಇದ್ದಾಗ ರಣಕಣಕ್ಕಿಳಿದ ಮೊರಿಸ್ ಅಜೇಯ 82 ರನ್ ಗಳಿಸಿದ್ದರು. ಇನ್ನು 17 ಎಸೆತಗಳಲ್ಲಿ ವೇಗದ ಅರ್ಧ ಶತಕ ಸಿಡಿಸಿ ಮೋರಿಸ್ ಐಪಿಎಲ್ ನ ಮೂರನೇ ವೇಗದ ಅರ್ಧಶತಕ ಇದಾಗಿದೆ.

ರೋಹಿತ್ ಶರ್ಮಾ
ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅತ್ಯಧಿಕ 264 ರನ್ ಗಳಿಸಿ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ಗಳಿಸಿದ ಖ್ಯಾತಿಗೆ ಭಾಜನರಾಗಿರುವ ರೋಹಿತ್ ಶರ್ಮಾ ಇದೀಗ ಈಡನ್ ಗಾರ್ಡನ್ ನಲ್ಲೆ ಮತ್ತೊಮ್ಮೆ ಮಿಂಚಿದ್ದಾರೆ. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 187 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡದ ನಾಯಕ 54 ಎಸೆತಗಳಲ್ಲಿ 84 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇನ್ನು 19ನೇ ಓವರ್ ನಲ್ಲಿ ಆ್ಯಂಡ್ರೂ ರುಸೆಲ್ ರನ್ನು ಕಾಡಿದ ರೋಹಿತ್ ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು.

ಗೌತಮ್ ಗಂಭೀರ್
ಕೆಲ ತಿಂಗಳಿನಿಂದ ಟೀಂ ಇಂಡಿಯಾದಿಂದ ದೂರ ಉಳಿದಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಪ್ರತಿ ಐಪಿಎಲ್ ನಲ್ಲೂ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಆಯ್ಕೆಗಾಗರಿಗೆ ತೋರಿಸುತ್ತಾ ಬಂದಿದ್ದಾರೆ. ಅದರಂತೆ ಪ್ರಸ್ತುತ ಐಪಿಎಲ್ ನಲ್ಲೂ ಮಿಂಚಿರುವ ಗೌತಮ್ ಗಂಭೀರ್ 56.14ರ ಸರಾಸರಿಯಲ್ಲಿ 393 ರನ್ ಸಿಡಿಸಿದ್ದಾರೆ. ಇನ್ನು ಐಪಿಎಲ್ 9ನೇ ಆವೃತ್ತಿಯಲ್ಲಿ 2ನೇ ಅಧಿಕ ರನ್ ಸಿಡಿಸಿದ ಆಟಗಾರನಾಗಿದ್ದಾರೆ. ಇನ್ನು ಸನ್ ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಅಜೇಯ 90 ರನ್ ಗಳಿಸಿದ್ದು ಅವರು ಗರಿಷ್ಠ ಸಾಧನೆಯಾಗಿದೆ.

ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಕಂಡ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪೈಕಿ ಅಗ್ರಮಾನ್ಯ ಸ್ಥಾನದಲ್ಲಿ ನಿಲ್ಲುವಂತ ಸ್ಫೋಟಕ ಆಟಗಾರ ವಿರಾಟ ಕೊಹ್ಲಿ ಪ್ರಸ್ತುತ ಐಪಿಎಲ್ ನಲ್ಲಿ ವಿರಾಟ ಪ್ರದರ್ಶನ ನೀಡುತ್ತಿದ್ದಾರೆ. ಪ್ರಸ್ತುತ ಐಪಿಎಲ್ ನಲ್ಲಿ ಗರಿಷ್ಠ ರನ್ ಗಳಿಸಿರುವ ಅಗ್ರಮಾನ್ಯ ಆಟಗಾರನಾಗಿದ್ದಾನೆ. ಇನ್ನು ಟಿ20ಯಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

Write A Comment