ಕನ್ನಡ ವಾರ್ತೆಗಳು

ಸುಬ್ರಹ್ಮಣ್ಯದಲ್ಲಿ ಅತ್ಯಾಧುನಿಕ ಶೈಲಿಯ ನವನವೀನ ಮಾದರೀಯ ಹೋಟೆಲ್ “ಸಾಯಿ ಸ್ಕಂದ” ಶುಭಾರಂಭ

Pinterest LinkedIn Tumblr

Sai_skand_photo_1

ಸುಳ್ಯ : ಸಾಯಿ ಸ್ಕಂದ ವೆಂಚರ್ಸ್ ಪ್ರಾಜೆಕ್ಟನವರ ನೂತನ ‘ಹೋಟೆಲ್ ಸಾಯಿ ಸ್ಕಂದ’ ಮೇ 2 ರಂದು ಸುಬ್ರಹ್ಮಣ್ಯದ ಕುಮಾರಧಾರ ನದಿಯ ತಟದಲ್ಲಿ ಶುಭಾರಂಭಗೊಂಡಿತ್ತು. 

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ನೂತನ ಹೋಟೆಲನ್ನು ಉದ್ಘಾಟಿಸಿ, ಅರ್ಶಿವಚನ ನೀಡಿದರು.ಸಂಸದ ನಳಿನ್ ಕುಮಾರ್ ಕಟೀಲ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಸುಳ್ಯ ಶಾಸಕ ಅಂಗಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಇನ್‌ಲ್ಯಾಂಡ್ ಗ್ರೂಪ್‌ನ ಚೆಯರ್‌ಮ್ಯಾನ್ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ದುಬೈ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಕನ್ನಡಿಗ ವರ್ಲ್ಡ್ ಅಂತರ್ಜಾಲ ತಾಣದ ಮಾಲಕ ಖ್ಯಾತ ಗಾಯಕ ಹರೀಶ್ ಶೇರಿಗಾರ್, ಅಖಿಲ ಭಾರತ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ಕೆ ಪಿ ನಂಜುಂಡಿ, ಜೈಶ್ರೀಕೃಷ್ಣ ಪರಿಸರ ಪೇಮಿ ಸಮಿತಿ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಮುಂಬಾಯಿ, ಮುಂಬೈ ಕಾರ್ಪೊರೇಟರ್ ಗೀತಾ ಬಾಲ ಚವಾಣ್, ಹಾಗೂ ಮಸ್ಕತ್ ಬಿಲ್ಲವಾಸ್ ಅಧ್ಯಕ್ಷ .ಎಸ್ ಕೆ ಪೂಜಾರಿ ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.

ಸಂಸ್ಥೆಯ ಆಡಳಿತ ಪಾಲುದಾರರಾದ ಮುಂಬೈಮೂಲದ ಪ್ರಸಿದ್ಧ ಜ್ಯೋತಿಷಿ, ಜಾತಕ ಮತ್ತು ವಾಸ್ತು ತಜ್ಞ ಹಾಗೂ ಅದೃಷ್ಟದ ಹರಳುಗಳ ಸಲಹೆಗಾರ ಅಶೋಕ್ ಪುರೋಹಿತ್, ಶಶಿ ಆರ್.ಶೆಟ್ಟಿ ದುಬೈ ಹಾಗೂ ಸೂರ್ಯಕಾಂತ್ ಎಮ್. ಶೇವಾಲೆ ಮುಂಬಾಯಿ ಅತಿಥಿಗಳನ್ನು ಸ್ವಾಗತಿಸಿದರು.

Sai_skand_photo_2 Sai_skand_photo_3 Sai_skand_photo_4 Sai_skand_photo_5 Sai_skand_photo_6 Sai_skand_photo_7 Sai_skand_photo_8 Sai_skand_photo_9 Sai_skand_photo_10 Sai_skand_photo_11 Sai_skand_photo_12 Sai_skand_photo_13 Sai_skand_photo_14 Sai_skand_photo_15 Sai_skand_photo_16 Sai_skand_photo_17 Sai_skand_photo_18 Sai_skand_photo_19 Sai_skand_photo_20 Sai_skand_photo_21 Sai_skand_photo_22 Sai_skand_photo_23 Sai_skand_photo_24 Sai_skand_photo_25

ವಾಸ್ತು ವೇದಿಕೆ ಟ್ರಸ್ಟ್‌ನ ಮ್ಯಾನಜಿಂಗ್ ಟ್ರಸ್ಟಿ ಕಲೈಚೆಮ್ಮಲ್ ದಕ್ಷಿಣಮೂರ್ತಿ ಸ್ತಪತಿ, ವಿಶ್ವಕರ್ಮ ಅಸೋಸಿಯೇಶನ್ ಬಹರೈನ್ ಇದರ ಅದ್ಜ್ಯಕ್ಷ ಜಗದೀಶ್ ಆಚಾರ್ಯ, ಮುಂಬೈ ಉದ್ಯಮಿ ವಾಮನ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಪ್ರಸ್ತಾವನೆಗೈದ ಸಂಸ್ಥೆಯ ಆಡಳಿತ ಪಾಲುದಾರ ಅಶೋಕ್ ಪುರೋಹಿತ್ ಅವರು ಮಾತನಾಡಿ, ನೂತನವಾಗಿ ಶುಭಾರಂಭಗೊಂಡ “ಸಾಯಿ ಸ್ಕಂದ” ಹೊಟೇಲ್ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಕೇವಲ 1 ಕಿಮೀ ದೂರದಲ್ಲಿದ್ದು, ಪಕ್ಕದಲ್ಲೇ ವಿಸ್ತಾರವಾಗಿ ವ್ಯಾಪಿಸಿರುವ ಕುಮಾರ ಪರ್ವತ ಮತ್ತು ಕುಮಾರಧಾರ ನದಿಯ ಸುಂದರ ಸೊಬಗನ್ನು ಹೋಟೆಲ್‌ ಮೂಲಕವೇ ವೀಕ್ಷಿಸಬಹುದಾಗಿದೆ. ಇತ್ತೀಚಿನ ಅಧುನಿಕ ಪರಂಪರೆಯನ್ನು ಹೊಂದಿಕೊಂಡು ಹೊಚ್ಚಹೊಸ ಶೈಲಿಯಲ್ಲಿ ನಿರ್ಮಾಣಗೊಂಡಿರುವ ನೂತನ ಹೋಟೆಲ್ ‘ಸಾಯಿ ಸ್ಕಂದ’ ಸಾಯಿ ಸ್ಕಂದ ವೆಂಚರ್ಸ್‌ನ ಪ್ರಥಮ ಯೋಜನೆಯಾಗಿದೆ ಎಂದರು.

ಗ್ರಾಹಕರ ಅನುಗುಣಕ್ಕೆ ತಕ್ಕಂತೆ ನಿರ್ಮಾಣಗೊಂಡಿರುವ “ಸಾಯಿ ಸ್ಕಂದ” ಹೊಟೇಲ್‌ನಲ್ಲಿ ನೈಸರ್ಗಿಕ ವಾತಾವರಣದೊಂದಿಗೆ ಗುಣಮಟ್ಟ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತಹ ಸೌಕರ್ಯವನ್ನು ಅಳವಡಿಸಲಾಗಿದ್ದು, ಗ್ರಾಹಕರಿಗೆ ನೆಮ್ಮದಿಯ ವಾತಾವರಣ ಇಲ್ಲಿ ಲಭಿಸುತ್ತದೆ. ಮಾತ್ರವಲ್ಲದೇ ವಿಶಿಷ್ಟ ವಿನ್ಯಾಸದ ಮೂಲಕ ನಿರ್ಮಾಣಗೊಂಡಿರುವ “ಸಾಯಿ ಸ್ಕಂದ” ಹೊಟೇಲ್‌ನಲ್ಲಿ ಪ್ರವಾಸಿಗರಿಗೆ ದೇವಾಲಯದ ಪೂರ್ಣ ಸೇವೆ ಪೂರ್ಣಗೊಂಡ ಬಳಿಕ ಆರಾಮದಾಯಕವಾಗಿ ಕಾಲಕಳೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

Sai_skand_photo_26 Sai_skand_photo_27 Sai_skand_photo_28 Sai_skand_photo_29 Sai_skand_photo_30 Sai_skand_photo_31 Sai_skand_photo_32 Sai_skand_photo_33 Sai_skand_photo_34 Sai_skand_photo_35 Sai_skand_photo_36 Sai_skand_photo_37 Sai_skand_photo_38 Sai_skand_photo_39 Sai_skand_photo_40 Sai_skand_photo_41 Sai_skand_photo_42 Sai_skand_photo_43 Sai_skand_photo_44 Sai_skand_photo_45 Sai_skand_photo_46 Sai_skand_photo_47 Sai_skand_photo_48 Sai_skand_photo_50

ವಿಶೇಷ ಸೌಲಭ್ಯಗಳು:

ವಿವಿಧ ದೇಶಗಳ ಸಮಯವನ್ನು ತೋರಿಸುವ ಗಡಿಯಾರಗಳು ಸೇರಿದಂತೆ ಉಚಿತ Wi-Fi, ಪ್ರವಾಸಿಗರಿಗೆ ಉತ್ತಮ ಮಾರ್ಗದರ್ಶನ ನೀಡುವ ಸ್ವಾಗತಕಾರರು, ಕೇಬಲ್ ಟಿವಿ, ಭದ್ರತೆ, ಬಿಸಿನೀರು, ಉತ್ತಮ ಕಾರ್ ಪಾರ್ಕಿಂಗ್ ಸೌಲಭ್ಯ, ದೇವಾಲಯದ ಪೂಜಾ ಸೇವೆಗಳ ವ್ಯವಸ್ಥೆ, ದೇವಸ್ಥಾನಕ್ಕೆ ಸಾರಿಗೆ ವ್ಯವಸ್ಥೆ, ಆಧುನಿಕ ಶೈಲಿಯ ಹವಾನಿಯಂತ್ರಿತ ಕೊಠಡಿ ಎಸಿ ರಹಿತ ಕೊಠಡಿ, ದಿನನಿತ್ಯ ಕೊಠಡಿ ಶುತಿತ್ವ ಕಾಪಾಡುವುದು, ತಾಜಾ ಆಹಾರಗಳನ್ನು ಪೂರೈಸುವ ರೆಸ್ಟೋರೆಂಟ್‌ಗಳು, ಅಗತ್ಯ ಬಿದ್ದರೆ ಹೆಚ್ಚುವರಿ ಹಾಸಿಗೆ ಸೌಲಭ್ಯ ಮೊದಲಾದ ಗ್ರಾಹರ ಅನುಕೂಲತೆಗೆ ತಕ್ಕಂತ ವ್ಯವಸ್ಥೆಗಳನ್ನು ಹೊಟೇಲ್ ಹೊಂದಿದೆ ಎಂದು ಅಶೋಕ್ ಪುರೋಹಿತ್ ತಿಳಿಸಿದರು.

Write A Comment