ಕರ್ನಾಟಕ

‘ನಿನಗೆ ಕೆಲಸ ಇಲ್ಲ ಆದ್ದರಿಂದ ನಿನ್ನ ಜೊತೆ ಮದುವೆಯಾಗಲ್ಲ ‘ ಎಂದಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ

Pinterest LinkedIn Tumblr

suಮೈಸೂರು,ಮೇ5-ನಿನಗೆ ಕೆಲಸ ಇಲ್ಲ ಆದ್ದರಿಂದ ನಿನ್ನನ್ನು ವಿವಾಹವಾಗಲು ಸಾಧ್ಯವಿಲ್ಲ ಎಂಬ ಯುವತಿಯ ನಿಂದನೆ ಸಹಿಸಲಾರದೆ ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ದಟ್ಟಕಳ್ಳಿ ಗ್ರಾಮದ ನಿವಾಸಿ ಅಜೀತ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಮದುವೆ ಪ್ರಸ್ತಾಪ ಬಂದಾಗ ಯುವತಿ ಹುಡುಗನನ್ನು ನೀನು ಯಾವ ಕೆಲಸ ಮಾಡುತ್ತೀಯ ಎಂದು ಕೇಳಿದ್ದು, ತನಗೆ ಯಾವ ಕೆಲಸವೂ ಇಲ್ಲ ಎಂದಿದಕ್ಕೆ ಮದುವೆಯಾಗಲು ನಿರಾಕರಿಸಿದ್ದಾಳೆ.

ಇದರಿಂದ ಮನನೊಂದ ಯುವಕ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Write A Comment