ರಾಷ್ಟ್ರೀಯ

ಜುಲೈನಲ್ಲಿ ಬರಲಿದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೀವನಚರಿತ್ರೆ

Pinterest LinkedIn Tumblr

Sania-Webನವದೆಹಲಿ: ಭಾರತೀಯ ಟೆನಿಸ್ ಕ್ಷೇತ್ರದ ಜನಪ್ರಿಯ ಹಾಗೂ ವಿಶ್ವ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ನಂ-1 ಸ್ಥಾನಗಳಿಸಿಕೊಂಡಿರುವ ಆಟಗಾರ್ತಿ ಸಾನಿಯಾ ಮಿರ್ಜಾ ಈಗ ಜೀವನ ಚರಿತ್ರೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಜುಲೈನಲ್ಲಿ ಜೀವನಚರಿತ್ರೆ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಾರ್ಪರ್ ಕಾಲಿನ್ಸ್ ಪ್ರಕಾಶನ ತಿಳಿಸಿದೆ.

‘ಅಛಿ ಅಜಚಜ್ಞಿಠಠಿ ಣಛಛಠ’ ಶೀರ್ಷಿಕೆಯಲ್ಲಿ ಜೀವನಚರಿತ್ರೆ ಪ್ರಕಟಿಸಲಾಗುತ್ತಿದ್ದು, ಸಾನಿಯಾ ಹಾಗೂ ಅವರ ತಂದೆ ಇಮ್ರಾನ್ ಮಿರ್ಜಾ ಅವರ ಬರಹಗಳನ್ನು ಒಗೊಂಡಿರುತ್ತದೆ. ವಿಶೇಷವಾಗಿ ಸಾನಿಯಾ ತಮ್ಮ ಜೀವನದ ಸಾಕಷ್ಟು ಅನುಭವಗಳನ್ನು, ಸ್ಪೂರ್ತಿಯಾಗಬಲ್ಲ ಘಟನೆಗಳನ್ನು ತಮ್ಮ ಬರಹಗಳಲ್ಲಿ ಹೇಳಿಕೊಂಡಿದ್ದಾರೆ ಎಂದು ಪ್ರಕಾಶಕಿ, ಮುಖ್ಯ ಸಂಪಾದಕಿ ಕಾರ್ತಿಕಾ ವಿ.ಕೆ ತಿಳಿಸಿದ್ದಾರೆ.

ತನ್ನ 16ನೇ ವಯಸ್ಸಿನಲ್ಲಿ ಟೆನಿಸ್ ಕ್ಷೇತ್ರದಲ್ಲಿ ಮಿಂಚಿನ ತಾರೆಯಾಗಿ ಕಾಣಿಸಿಕೊಂಡಿರುವ ಸಾನಿಯಾ ಮಿರ್ಜಾ, ನಂತರದ ದಿನಗಳಲ್ಲಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಸೇರಿದಂತೆ ಸಾಕಷ್ಟು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾನಿಯಾ ಮಿರ್ಜಾ, ಟೆನಿಸ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುಕೊಂಡಿರುವ ಹಾಗೂ ಟಿನಿಸ್ನಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಟ್ಟಿಕೊಂಡಿರುವ ಯುವಕ-ಯುವತಿಯರಿಗೆ ಈ ಪುಸ್ತಕ ಉತ್ತಮ ಕೈಪಿಡಿಯಾಗಿರಲಿದೆ ಎಂದು ಭಾವಿಸುತ್ತೇನೆ. ಅಷ್ಟೇ ಅಲ್ಲ ಅಂಥವರಿಂದ ಗ್ರಾಂಡ್ಸ್ಲಾಂ ಪ್ರಶಸ್ತಿಯನ್ನೂ ನಿರೀಕ್ಷಿಸುತ್ತೇನೆ, ಆಶಿಸುತ್ತೇನೆ ಎಂದಿದ್ದಾರೆ.

2012ರಲ್ಲಿಯೇ ಸಿಂಗಲ್ಸ್ ಸ್ಪರ್ಧೆಗೆ ಗುಡ್ಬೈ ಹೇಳಿ ದೂರವಿರುವ ಸಾನಿಯಾ ಮಿರ್ಜಾ ಸದ್ಯ ಮಹಿಳಾ ಡಬಲ್ಸ್ನ ಬಲಿಷ್ಠ ಎದುರಾಳಿ ಎನಿಸಿಕೊಂಡಿದ್ದಾರೆ. ಮಾರ್ಟಿನಾ ಹಿಂಗೀಸ್ ಜತೆಗೂಡಿ ಆಡುತ್ತಿರುವ ಸಾನಿಯಾ ಮಿರ್ಜಾ 2015 ಮತ್ತು 2016ನೇ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಿರಂತರ 41 ಪಂದ್ಯಗಳಲ್ಲಿ ಗೆಲುವ ಕಂಡುಕೊಂಡಿದ್ದಾರೆ.

Write A Comment