ರಾಷ್ಟ್ರೀಯ

ಬಿಬಿಎಂಪಿಗೂ ಬಂತು ಅತ್ಯಾಧುನಿಕ ಕಾಲ್‌ಸೆಂಟರ್ ..! ನಾಲ್ಕು ತಿಂಗಳಲ್ಲಿ ಕಾರ್ಯಾರಂಭ

Pinterest LinkedIn Tumblr

bbmpಬೆಂಗಳೂರು,ಮೇ4 – ಸಾರ್ವಜನಿಕರ ಹಲವಾರು ಕುಂದುಕೊರತೆಗಳ ಮನವಿಯನ್ನು ಸ್ವೀಕರಿಸುವ ಅತ್ಯಾಧುನಿಕ ಕಾಲ್‌ಸೆಂಟರ್‌ನ್ನು ಪಾಲಿಕೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಈ ಕಾಲ್‌ಸೆಂಟರ್ ನಾಲ್ಕು ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಮೇಯರ್ ಮಂಜುನಾಥ ರೆಡ್ಡಿ ತಿಳಿಸಿದರು. ಅತ್ಯಾಧುನಿಕ ಕಾಲ್‌ಸೆಂಟರ್ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರು ಸುಮಾರು 800 ಕಿ.ಮೀ ವ್ಯಾಪ್ತಿಗೆ ವಿಸ್ತರಿಸಿದೆ. ಅದೇ ರೀತಿ ಮೂಲಭೂತ ಸೌಲಭ್ಯಗಳು ಸಹ ಹೆಚ್ಚಾಗಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೂರು ಸ್ವೀಕರಿಸುವ ಕಾಲ್‌ಸೆಂಟರ್‌ನ್ನು ತೆರೆಯಲಾಗುತ್ತಿದೆ ಎಂದರು.

ಕಾಲ್ ಸೆಂಟರ್ ಪ್ರಾರಂಭವಾದ ಮೇಲೆ ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಬಿಎಂಪಿಗೆ ಸಂಬಂಧಿಸಿದ ದೂರು ನೀಡಬಹುದಾಗಿದ್ದು, ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಿದೆ ಎಂದರು. ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಈ ಕಾಲ್‌ಸೆಂಟರ್ ಕೊಠಡಿಯು ಅತ್ಯಾಧುನಿಕ ಸೇವೆಗಳನ್ನು ಒಳಗೊಂಡಿದ್ದು, ದೂರು ಸ್ವೀಕಾರಕ್ಕಾಗಿ ಅತ್ಯಾಧುನಿಕ ಅಪ್ಲಿಕೇಷನ್‌ನ್ನು ಸಿದ್ದಪಡಿಸಲಾಗುತ್ತಿದ್ದು, ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಹವಾಮಾನ ಇಲಾಖೆ ಪ್ರಕೃತಿ ವಿಕೋಪ ನಿರ್ವಹಣೆ ಸಂಸ್ಥೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಇದರಿಂದ ನಗರದಲ್ಲಿ ಬೀಳುವ ಹೆಚ್ಚು ಮಳೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಮಳೆ ಬೀಳುವ ಏಳುಂಟು ಗಂಟೆಮುಂಚೆ ಹೆಚ್ಚು ಮಳೆ ಬೀಳೂವ ಪ್ರದೇಶಗಳಿಗೆ ಸಿಬ್ಬಂದಿಗಳು ಧಾವಿಸಿ ಪ್ರಕೃತಿ ವಿಕೋಪಗಳಿಂದಾಗುವ ಅನಾಹುತಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು. ಈ ಕಾಲ್‌ಸೆಂಟರ್‌ನಲ್ಲಿ 44 ಮಂದಿ ಕಾರ್ಯ ನಿರ್ವಹಿಸಿದ್ದು, ಕಾಲ್‌ಸೆಂಟರ್‌ನ ಕಂಪ್ಯೂಟರ್ ಕೀಲಿಮನೆಯಿಂದಾಗುವ ಕಿರಿಕಿರಿಯನ್ನು ಸಿಬ್ಬಂದಿಗಳು ಕೇಳದಂತೆ ನಿಶ್ಯಬ್ದವಾಗಿ ಕಾರ್ಯ ನಿರ್ವಹಿಸಲು ಪ್ರತ್ಯೇಕ ಕಂಪ್ಯೂಟರ್, ಸಲಕರಣೆಗಳನ್ನು ಒದಗಿಸುತ್ತಾ ಇದ್ದೇವೆ.

ವಿಷಾದವಾದ ಸ್ಥಳಗಳಲ್ಲಿ ಕಾಲ್‌ಸೆಂಟರ್‌ಇರುವುದರಿಂದ ಸಾರ್ವಜನಿಕರು ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಸದರಿ ಕಾಲ್‌ಸೆಂಟರ್‌ನಲ್ಲಿ ಟೆಲಿಫೋನ್ ಸ್ವಿಚ್ ಫಂಕ್ಷನ್ಯಾಲಿಟಿ, ಇಂಟಿಲಿಜೆಂಟ್ ರೂಟಿಂಗ್, ಆಟೋಮೆಟಿಕ್ ಕಾಲ್ ಡಿಸ್ಟ್ರುಬುಷನ್, ಇಂಟರಾಕ್ಟಿವ್ ವಾಯ್ಸ್ ರೆಪಾನ್ಸ್ ಸಿಸ್ಟಮ್, ವಾಯಸ್ ಮೇಲ್ ಮತ್ತಿತರ ಸಾಧನ ಸಲಕರಣಿಗಳ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಸೇರಿದಂತೆ ಮತ್ತಿತರರು ಇದ್ದರು.

Write A Comment