ರಾಷ್ಟ್ರೀಯ

ಉತ್ತರಾಖಂಡ್ ವಿಧಾನಸಭೆ ವಿವಾದ ಕುರಿತಂತೆ ಕೇಂದ್ರದ ಮನವಿಗೆ ಸುಪ್ರೀಂ ಸಮ್ಮತಿ

Pinterest LinkedIn Tumblr

suprimನವದೆಹಲಿ,ಮೇ4- ಉತ್ತರಾಖಂಡ್ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಪ್ರತಿಕ್ರಿಯೆ ನೀಡಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕೆಂಬ ಕೇಂದ್ರದ ಮನವಿಯನ್ನು ಸರ್ವೋಚ್ಛ ನ್ಯಾಯಲಯ ಇಂದು ಅಂಗೀಕರಿಸಿದೆ.

ನ್ಯಾಯಾಲಯದ ಆದೇಶದ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಪರಿಶೀಲನೆ ನಡೆಸಿದ್ದು , ಎರಡು ದಿನದ ಅವಕಾಶ ಕೇಳಲಾಗಿದೆ ಎಂಬ ಅಟಾರ್ನಿ ಮುಕುಲ್ ರೋಹಟಗಿ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಸದ್ಯ ರಾಷ್ಟ್ರಪತಿ ಆಡಳಿತ ಹೇರಿಕೆಯಿಂದ ಉತ್ತರಾಖಂಡ್‌ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು , ವಿವಾದಗಳನ್ನು ಬಗೆಹರಿಸಲು ಸದನದಲ್ಲಿ ವಿಶ್ವಾಸ ಮತಯಾಚನೆ(ಬಹುಮತ ಸಾಬೀತು)ಗೆ ಅನುವು ಮಾಡಿಕೊಡಬೇಕೆಂಬ ಸರ್ವೋಚ್ಛ ನ್ಯಾಯಾಲಯದ ಸೂಚನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎ.ಜಿ ಹೇಳಿದ್ದರು.

Write A Comment