ರಾಷ್ಟ್ರೀಯ

ರಾಜ್ಯಸಭೆ ಟಿಕೆಟ್‌ಗೆ ಚಿದಂಬರಂ ಟವೆಲ್

Pinterest LinkedIn Tumblr

Chidambaram-Pಬೆಂಗಳೂರು, ಮೇ ೪ – ಕರ್ನಾಟಕ ವಿಧಾನಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭೆ ಪ್ರವೇಶಿಸಲು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಬಲವಾಗಿ ಯತ್ನಿಸುತ್ತಿರುವ ಅಂಶ ಬಯಲಿಗೆ ಬಂದಿದೆ.
ಚಿದಂಬರಂ ಪ್ರಸ್ತುತ ಯಾವ ಸದನದ ಸದಸ್ಯರೂ ಅಲ್ಲ, ತವರು ರಾಜ್ಯ ತಮಿಳುನಾಡಿನಿಂದ ರಾಜ್ಯಸಭೆ ಪ್ರವೇಶಿಸುವುದು ಅಸಾಧ್ಯ. ಹೀಗಾಗಿ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಕ್ಕೆ ಹೈಕಮಾಂಡ್ ಮಟ್ಟದಲ್ಲಿ ಯತ್ನಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜ್ಯಸಭೆಯ ಇನ್ನೊಂದು ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ರಾಜಸಭಾ ಸದಸ್ಯರಾದ ಕಾಂಗ್ರೆಸ್‌ನ ಆಸ್ಕರ್‌ಫರ್ನಾಂಡೀಸ್, ಬಿಜೆಪಿಯ ಎಂ ವೆಂಕಯ್ಯನಾಯ್ಡು, ಆಯನೂರು ಮಂಜುನಾಥ್, ಪಕ್ಷೇತರ ಸದಸ್ಯ ಡಾ. ವಿಜಯಮಲ್ಯ ಅವರು ಜೂನ್ 30ರಂದು ನಿವೃತ್ತಿಯಾಗಲಿದ್ದು, ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ಎದುರಾಗಲಿದೆ.
ಆಸ್ಕರ್ ಫರ್ನಾಂಡಿಸ್ ಪುನರಾಯ್ಕೆ ಬಯಸಿದ್ದು, ಹೈಕಮಾಂಡ್ ತೀರ್ಮಾನದ ಮೇಲೆ ಅವರ ಮರು ಆಯ್ಕೆ ನಿರ್ಧಾರವಾಗಲಿದೆ.
ರಾಜಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲ ಎಂಬ ಕೊರಗು ನಿವಾರಿಸಲು ಮಾಜಿ ಸಚಿವೆ ರಾಣಿಸತೀಶ್ ಅಥವಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್‌ಕರ್ ಅವರ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

Write A Comment