ಕರ್ನಾಟಕ

ಸೋಮಯಾಗ ಯಾವ ಕಲ್ಯಾಣಕ್ಕೆ

Pinterest LinkedIn Tumblr

newಶಿವಮೊಗ್ಗ.ಮೇ.೪-ತಾಲ್ಲೂಕಿನಮತ್ತೂರಿನಲ್ಲಿ ಇತ್ತೀಚೆಗೆ ನಡೆದ ಸೋಮಯಾಗದಲ್ಲಿ ಮೇಕೆಗಳನ್ನು ಬಲಿ ನೀಡಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಂಕೇತಿ ಬ್ರಾಹ್ಮಣ ವಲಯದಲ್ಲಿಯೇ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಮತ್ತೂರು ಹೊರವಲಯದ ಶ್ರೀಕಂಠಪುರದ ವ್ಯಕ್ತಿಯೊಬ್ಬರ ಅಡಿಕೆ ಕಣದಲ್ಲಿ ಏ.೨೨ರಿಂದ ೨೭ರ ತನಕ ಸೋಮಯಾಗ ನಡೆದಿದ್ದು, ಎಂಟಕ್ಕೂ ಹೆಚ್ಚು ಮೇಕೆಗಳನ್ನು ಬಲಿ ನೀಡಿರುವುದು ಚರ್ಚೆಗೆ ಆವಕಾಶ ಮಾಡಿಕೊಟ್ಟಿದೆ.
ಅಷ್ಟಕ್ಕೂ ಸೋಮಯಾಗ ಇಂದು ನಿನ್ನೆ ನಡೆಯುತ್ತಿರುವುದೇನಲ್ಲ. ಪ್ರಾಣಿ ಬಲಿಯೂ ಇಂದು ನಿನ್ನೆ ನಡೆಯುತಿರುವುದೇನಲ್ಲ. ಆದರೆ ಇಂಥ ಅನಿಷ್ಟ ಪದ್ಧತಿಗಳನ್ನು, ಮೂಢ ನಂಬಿಕೆಗಳು ಇಂದಿಗೂ ಜಾರಿಯಲ್ಲಿರುವುದು ಇಷ್ಟೊಂದು ಚರ್ಚೆಗೆ ಕಾರಣವಾಗುತ್ತಿದೆ. ಅದರಲ್ಲೂ ಅದ್ವೈತ ಸಿದ್ಧಾಂತವನ್ನು ಅನುಸರಿಸುತ್ತಿರುವ ಸಂಕೇತಿ ಬ್ರಾಹ್ಮಣರು ಈ ಕಾರ್ಯ ನಡೆಸಿರುವುದು ಅವರದೇ ಸಮುದಾಯದ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಾಣಿ ಬಲಿ ನೀಡುರುವ ವೀಡಿಯೋ ತುಣುಕು ಈಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಅಗ್ನಿಯಲ್ಲಿ ಬೆಂದಿರುವ ಮಾಂಸವನ್ನು ಪ್ರಸಾದದ ರೂಪದಲ್ಲಿ ಸೇವಿಸಲಾಗಿದೆ ಎನ್ನುವುದು ಚರ್ಚೆಗೆ ಮತ್ತೊಂದು ಕಾರಣವಾಗಿದೆ.
ಆಯೋಜಕರ ಸಮರ್ಥನೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೋಜಕ ಡಾ. ಸನತ್ ಕುಮಾರ್, ಇದು ಖಾಸಗಿಯಾದ ಕಾರ್ಯಕ್ರಮವೇ ಹೊರತು ಸಾರ್ವಜನಿಕವಾದುದಲ್ಲ. ಯಾವುದೇ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ನಡೆಸಿದ್ದೂ ಅಲ್ಲ. ಲೋಕಕಲ್ಯಾಣಕ್ಕಾಗಿ ಸೋಮಯಾಗ ನಡೆಸಲಾಗಿದೆಯಷ್ಟೆ. ಮೇಕೆಯನ್ನು ಬಲಿ ನೀಡಲಾಗಿದೆ ಎನ್ನುವುದರಲ್ಲಿ ಆರ್ಥವಿಲ್ಲ. ಪ್ರಾಣಿ ಪೂಜೆಯ ಬಳಿಕ ಏನು ಮಾಡಿದ್ದೇವೆ ಎನ್ನುವುದರ ಯಾರೂ ಸತ್ಯ ತಿಳಿಯುವುದಿಲ್ಲ. ಈ ಬಗ್ಗೆ ಹೆಚ್ಚೇನು ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Write A Comment