ಮನೋರಂಜನೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್

Pinterest LinkedIn Tumblr

bipasha-karan-wedding

ಬಾಲಿವುಡ್ ನ ಕಪ್ಪು ಸುಂದರಿ, ಹಾಟ್ ನಟಿ ಬಿಪಾಶಾ ಬಸು ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ವರಿಸಿರುವ ಬಿಪಾಶಾ ಬಸು ಬೆಂಗಾಲಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ.

ಏಪ್ರಿಲ್ 30ರಂದು ಮುಂಬೈನಲ್ಲಿರುವ ಸಬರ್ ಬನ್ ಹೊಟೇಲ್ ನಲ್ಲಿ ವಿವಾಹ ಸಮಾರಂಭ ನೆರವೇರಿದೆ. ಕಳೆದ ವರ್ಷ ಜನವರಿಯಲ್ಲಿ ತೆರೆಕಂಡ ಅಲೋನ್ ಚಿತ್ರದಲ್ಲಿ ಕರಣ್ ಮತ್ತು ಬಿಪಾಶಾ ಒಟ್ಟಾಗಿದ್ದರು. ಅನಂತರ ಇಬ್ಬರ ನಡುವೆ ಪ್ರೀತಿ ಪ್ರೇಮ ಬೆಳೆದು ಸಪ್ತಪದಿ ತುಳಿಯುವ ಮೂಲಕ ಹೊಸ ಶುರುಮಾಡಿದ್ದಾರೆ.

ಏಪ್ರಿಲ್ 28ರಿಂದಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡು, ಸಂಗೀತ ಸಮಾರಂಭ, ಮೆಹಂದಿ ಸೇರಿದಂತೆ ಹಲವು ಸಂಪ್ರದಾಯ ಕಾರ್ಯಕ್ರಮಗಳು ನೆರವೇರಿದವು, ಬೆಂಗಾಳಿ ಹಾಗೂ ಪಂಜಾಬಿ ಮಿಶ್ರ ಪದ್ಧತಿಯಲ್ಲಿ ಮದುವೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಮದುವೆ ನಂತರ ಅದ್ಧೂರಿ ರಿಸೆಪ್ಷನ್ ಕೂಡ ನಡೆದಿದೆ. 37 ವರ್ಷದ ಬಿಪಾಶ ರೆಡ್ ಡ್ರೆಸ್ ನಲ್ಲಿ ಹಾಗೂ ಕರಣ್ ಬಿಳಿ ಶೇರ್ವಾನಿಯಲ್ಲಿ ಮಿಂಚಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು ಪಾಲ್ಗೊಂಡಿದ್ದರು.

Write A Comment