ಮನೋರಂಜನೆ

ನಿಲ್ಲದ ವಿಜೇಂದರ್ ಸಿಂಗ್ ನಾಕೌಟ್ ಪ೦ಚ್, ಮತ್ತೊಂದು ರೋಚಕ ಜಯ

Pinterest LinkedIn Tumblr

vijender-singh111

ಲ೦ಡನ್: ಭಾರತದ ಸ್ಟಾರ್ ಬಾಕ್ಸರ್ ವಿಜೇ೦ದರ್ ಸಿ೦ಗ್ ಅವರ ಗೆಲುವಿನ ನಾಗಾಲೋಟ ಮುಂದುವರೆದಿದೆ.

ಫ್ರಾನ್ಸ್ ನ ಮಾಟಿಯಾಜ್ ರಾಯರ್ ಗೆ ವಿಜೇಂದರ್ ಸಿಂಗ್ ರಾಯಲ್ ಪಂಚ್ ಗಳನ್ನು ನೀಡುವ ಮೂಲಕ ಸತತ 5ನೇ ನೌಕೌಟ್ ಗೆಲುವು ದಾಖಲಿಸಿದ್ದಾರೆ.

30 ವಷ೯ದ ವಿಜೇ೦ದರ್ ವೃತ್ತಿಪರ ಬಾಕ್ಸಿ೦ಗ್‍ನಲ್ಲಿ ಇದುವರೆಗೆ ಆಡಿದ ಅತ್ಯ೦ತ ಸುದೀಘ೯ ಪ೦ದ್ಯ ಇದಾಗಿತ್ತು. ಅತ್ಯ೦ತ ಎಚ್ಚರಿಕೆ ಕಾದಾಟಕ್ಕಿಳಿದ ರಾಯರ್ ತ೦ತ್ರ ಅ೦ದಾಜಿಸುವಲ್ಲಿ ಮೊದಲ ಸುತ್ತಿನ ಹೆಚ್ಚಿನ ಸಮಯ ಕಳೆದ ವಿಜೇಂದರ್ ಸಿಂಗ್ 2ನೇ ಸುತ್ತಿನ ನ೦ತರ ಎದುರಾಳಿ ಮೇಲೆ ಮುಗಿ ಬಿದ್ದರು.

ರಕ್ಷಣಾತ್ಮಕ ಆಟದಲ್ಲೇ ಹೆಚ್ಚಿನ ಸಮಯ ಕಳೆದ ರಾಯರ್, ತನಗಿ೦ತ ಎತ್ತರವಾಗಿದ್ದ ವಿಜಿಗೆ ಹೆಚ್ಚಿನ ಹೊಡೆತ ನೀಡಲು ಸಾಧ್ಯವಾಗಲೇ ಇಲ್ಲ. ವಿಜೇಂದರ್ ಹೊಡೆತಕ್ಕೆ ತತ್ತರಿಸಿ ರಾಯರ್ 5ನೇ ಸುತ್ತಿನಲ್ಲೇ ಆಟ ಮು೦ದುವರಿಸಲು ಶಕ್ತರಾಗದೆ ಶರಣಾಗಿಬಿಟ್ಟರು.

Write A Comment