ಮನೋರಂಜನೆ

ಸೆಲ್ಫೀ ತೆಗೆದುಕೊಳ್ಳಲು ಬಂದ ಅಕ್ಷಯ್ ಕುಮಾರ್ ಅಭಿಮಾನಿಗೆ ಥಳಿತ

Pinterest LinkedIn Tumblr

Akshay-Kumarksha

ಮುಂಬೈ: ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರ ಜೊತೆ ಸೆಲ್ಫೀ ತೆಗೆದು ಕೊಳ್ಳಲು ಬಂದ ಅಭಿಮಾನಿಯೊಬ್ಬರಿಗೆ ಅಕ್ಷಯ್ ಕುಮಾರ್ ಅವರ ಬಾಡಿಗಾರ್ಡ್‌ ಥಳಿಸಿರುವ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅಕ್ಷಯಕುಮಾರ್ ಜೊತೆ ಅಭಿಮಾನಿಯೊಬ್ಬ ಸೆಲ್ಫೀ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಅಕ್ಷಯ್ ಬಾಡಿಗಾರ್ಡ್‌ ಅಭಿಮಾನಿಯನ್ನು ಥಳಿಸಿದ್ದಾನೆ. ಅಭಿಮಾನಿಯನ್ನು ಥಳಿಸಿದ ಬಾಡಿಗಾರ್ಡ್‌ ವರ್ಷಗಳಿಂದ ಅಕ್ಷಯ್ ಬಳಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಇನ್ನು ಈ ಪ್ರಮಾದಕ್ಕೆ ನಟ ಅಕ್ಷಯ್ ಕುಮಾರ್ ಕ್ಷಮೆ ಕೋರಿದ್ದಾರೆ. ಪ್ರತಿ ಸಲ ಹೀಗೆ ಆಗಬಾರದು ಎಂದು ಬಯಸುತ್ತೇನೆ, ದುರಾದೃಷ್ಟವಶಾತ್ ಆಗಿ ಬಿಡುತ್ತದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿರುವ ಅವರು ಅಭಿಮಾನಿಗಳೇ ನಮಗೆ ಮುಖ್ಯ ಎಂದು ಹೇಳಿದ್ದಾರೆ.

Write A Comment