ಮನೋರಂಜನೆ

ಸಲ್ಮಾನ್ ಖಾನ್ ನೀಡಿದ ಆಫರ್‍ನ್ನು ನಿರಾಕರಿಸಿದ ಕತ್ರಿನಾ ಕೈಫ್‍ !

Pinterest LinkedIn Tumblr

salman-katrinakaif

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿ ಕತ್ರಿನಾ ಕೈಫ್‍ಗೆ ಆಫರ್‍ವೊಂದನ್ನು ಇಟ್ಟಿದ್ದಾರೆ. ಸಲ್ಮಾನ್ ಖಾನ್ ನಟಿಸುತ್ತಿರುವ ಚಿತ್ರದಲ್ಲಿ ನಟಿಸಲು ಕತ್ರಿನಾಗೆ ಸಖತ್ ಆಫರ್ ನೀಡಿದ್ದಾರಂತೆ.

ಹೌದು. ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕರಣ್ ಜೊಹಾರ್ ಟೀಂನಲ್ಲಿ ಚಿತ್ರವೊಂದು ಮೂಡಿಬರುತ್ತಿದ್ದು, ಈ ಚಿತ್ರವನ್ನು ಸಲ್ಮಾನ್ ಸಹ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಚಿತ್ರತಂಡ ಕತ್ರಿನಾಳನ್ನು ನಾಯಕಿಯಾಗಿ ಆಯ್ಕೆ ಮಾಡಿತ್ತಂತೆ ಆದ್ರೆ ಕತ್ರಿನಾ ಈ ಆಫರ್ ನಿರಾಕರಿಸಿದ್ದಾರೆ.

ಕತ್ರಿನಾ ಕೈಫ್ ಈ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದು ಆಶ್ಚರ್ಯ ಮೂಡಿಸಿದೆಯಾದರೂ, ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕತ್ರಿನಾ ಡೇಟ್ಸ್ ಸಮಸ್ಯೆಯಿಂದ ಈ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

Write A Comment