ಮನೋರಂಜನೆ

ಡ್ರಗ್ ಮಾಫಿಯಾದಲ್ಲಿ ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ, ಪತಿ ವಾಂಟೆಡ್

Pinterest LinkedIn Tumblr

Mamta-Kulkarni

ಮುಂಬೈ: ಡ್ರಗ್ ಮಾಫಿಯಾದಲ್ಲಿ ಬಾಲಿವುಡ್ ಮಾಜಿ ನಟಿ ಮಮತಾ ಕುಲಕರ್ಣಿ ಪಾತ್ರವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆಕೆಯ ಪತಿ ವಿಕ್ಕಿ ಗೋಸ್ವಾಮಿ ಡ್ರಗ್ ಮಾಫಿಯಾದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ.

ಇತ್ತೀಚಿಗಷ್ಟೇ ಥಾಣೆ ಪೊಲೀಸರು 2 ಸಾವಿರ ಕೋಟಿ ರುಪಾಯಿ ಮೌಲ್ಯದ 20 ಟನ್ ಎಫಡ್ರಿನ್ ಮಾದಕ ದ್ರವ್ಯ ವಷಪಡಿಸಿಕೊಂಡಿದ್ದು, ಈ ಮಾಫಿಯಾದಲ್ಲಿ ಕೀನ್ಯಾದಲ್ಲಿರುವ ಮಮತಾಳ ಪತಿ ವಿಕ್ಕಿ ಗೋಸ್ವಾಮಿ ಕೈವಾಡ ಇದೆ ಎನ್ನಲಾಗಿದೆ.

1997ರಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಪಟ್ಟಂತೆ ಈತ ದುಬೈನಲ್ಲಿ ಸಿಕ್ಕಿಬಿದ್ದು 15 ವರ್ಷ ಜೈಲುವಾಸ ಅನುಭವಿಸಿದ್ದನು.ಜಾಮೀನಿನ ಮೇಲೆ ಹೊರ ಬಂದಿರುವ ವಿಕ್ಕಿ ಸದ್ಯ ಪತ್ನಿ ಮಮತಾ ಕುಲಕರ್ಣಿ ಜತೆ ಕೀನ್ಯಾದ ರಾಜಧಾನಿ ನೈರೋಭಿಯಲ್ಲಿ ನೆಲೆಸಿದ್ದು, ಅಮೆರಿಕ ಮತ್ತು ಥಾಣೆ ಪೊಲೀಸರಿಗೆ ಬೇಕಾಗಿರುವ ಅಪರಾಧಿಯಾಗಿದ್ದಾನೆ. ಈತನ ವಿರುದ್ಧ ಇಂಟರ್​ಪೋಲ್ ನೊಟೀಸ್ ಇರುವುದರಿಂದ ಕೀನ್ಯಾವನ್ನು ಬಿಟ್ಟು ಹೋಗುವಂತಿಲ್ಲ.

ವಿಕ್ಕಿ ಗೋಸ್ವಾಮಿ ತನ್ನ ಪತ್ನಿ ಮಮತಾ ಕುಲಕರ್ಣಿ ಮೂಲಕ ಸಿಂಗಾಪುರ, ದ.ಆಫ್ರಿಕಾ, ದುಬೈ, ಅಮೆರಿಕ ಮುಂತಾದೆಡೆ ಗ್ರಾಹಕರನ್ನು ಭೇಟಿಯಾಗಿ ತನ್ನ ವ್ಯವಹಾರ ನಡೆಸುತ್ತಾನೆ ಎಂದು ಥಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಿಸಿ ಮಂಗಳವಾರ ಪೊಲೀಸ್ ನಡೆಸಿದ ಕಾರ್ಯಾಚರಣೆಯಲ್ಲಿ ಶೃಂಗಿ ಎಂಬಾತ ಸಿಕ್ಕಿಬಿದ್ದಿದ್ದು ವಿಕ್ಕಿ ಗೋಸ್ವಾಮಿ ಜತೆ ನಿಕಟ ಸಂಬಂಧವಿರುವುದಾಗಿ ಹೇಳಿದ್ದಾನೆ.

Write A Comment