ಮನೋರಂಜನೆ

ಫೇಸ್‌ಬುಕ್‍ ನಲ್ಲಿಯೂ ದಾಖಲೆ ಮಾಡಿದ ವಿರಾಟ್ ಕೊಹ್ಲಿ ! ಏನು ದಾಖಲೆ ನೀವೇ ನೋಡಿ…

Pinterest LinkedIn Tumblr

virat

ನವದೆಹಲಿ: ಫೇಸ್‌ಬುಕ್‍ನಲ್ಲಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗುಣಗಾನವೇ ಜಾಸ್ತಿ.

ಐಪಿಎಲ್ ನಲ್ಲಿ ಆರ್ಸಿಬಿ ಹಲವು ಪಂದ್ಯಗಳಲ್ಲಿ ಸೋತಿರಬಹುದು. ಆದರೆ ನಾಯಕ ವಿರಾಟ್ ಕೊಹ್ಲಿ ಬಗೆಗಿನ ಚರ್ಚೆಗಳಿಗೆ ಮಾತ್ರ ಕಡಿಮೆಯಿಲ್ಲ. ಒಟ್ಟಾರೆ ಐಪಿಎಲ್ ಬಗ್ಗೆ ಸುಮಾರು 11.10 ಕೋಟಿ ಅಭಿಮಾನಿಗಳು ಚರ್ಚಿಸಿದ್ದರು. ವಿರಾಟ್ ಕೊಹ್ಲಿ ಬಗ್ಗೆ 2.71 ಕೋಟಿ ಅಭಿಮಾನಿಗಳು ಮಾತನಾಡುತ್ತಾರೆ.

ಇನ್ನು ಗಾಯಗೊಂಡು ಪಂದ್ಯಗಳಲ್ಲಿ ಆಡದಿದ್ದರು ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಬಗ್ಗೆ 1.10 ಕೋಟಿ ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ. ಶಿಖರ್ ಧವನ್ ಬಗ್ಗೆ 95 ಲಕ್ಷ, ರೋಹಿತ್ ಶರ್ಮಾ ಬಗ್ಗೆ 67 ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ.

Write A Comment