ಕರ್ನಾಟಕ

ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಆತ್ಮಹತ್ಯೆ

Pinterest LinkedIn Tumblr

su

ಬೆಂಗಳೂರು: ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಯನಗರದ 9ನೇ ಬ್ಲಾಕ್ ನಲ್ಲಿ ನಡೆದಿದೆ.

ಜೆಪಿನಗರದ ಕೆನರಾ ಬ್ಯಾಂಕ್ ನ ಸಿನಿಯರ್ ಮ್ಯಾನೇಜರ್ ಸುಧೀಂದ್ರ ಮೂರ್ತಿ(57) ಅವರು ಇಂದು ಬೆಳಗ್ಗೆ ಜಯನಗರದ 9ನೇ ಬ್ಲಾಕ್ ನಲ್ಲಿರುವ ಶಾಂತಿ ಅಪಾರ್ಟ್ ಮೆಂಟ್ ನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.

ಸುಧೀಂದ್ರ ಮೂರ್ತಿ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮ ಸಾವಿಗೆ ಬ್ಯಾಂಕ್ ನ ಹಿರಿಯ ಅಧಿಕಾರಗಳ ಕಿರುಕಳವೇ ಕಾರಣ ಎಂದು ಹೇಳಿದ್ದಾರೆ.

ಬ್ಯಾಂಕಿನ ಹಣಕಾಸಿನ ವ್ಯವಹಾರದಲ್ಲಿ ಉಂಟಾಗಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದ ಸುಧೀಂದ್ರಮೂರ್ತಿ ಅವರು, ಪತ್ನಿ ಮಕ್ಕಳೊಂದಿಗೆ ಅದನ್ನು ಹಂಚಿಕೊಂಡು ನೊಂದುಕೊಳ್ಳುತ್ತಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ೧ಗಂಟೆಯವರಗೆ ಇದೇ ವಿಷಯವಾಗಿ ನೊಂದು ಕುಳಿತಿದ್ದ ಮೂರ್ತಿ ಅವರಿಗೆ ಪತ್ನಿ ಮಕ್ಕಳು ಧೈರ್ಯ ತುಂಬಿದ್ದರು.ಆದರೆ ಧೈರ್ಯದಿಂದ ಇರುವುದಾಗಿ ಹೇಳಿ ಪತ್ನಿ ಮಕ್ಕಳನ್ನು ಮಲಗಲು ಕಳುಹಿಸಿ ನಂತರ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಲಕ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment