ಮನೋರಂಜನೆ

ಪಾಕ್ ನಲ್ಲಿ ‘ಭಜರಂಗಿ ಭಾಯಿಜಾನ್’ ನಿರ್ದೇಶಕ ಕಬೀರ್ ಖಾನ್ ಮೇಲೆ ಹಲ್ಲೆಗೆ ಯತ್ನ

Pinterest LinkedIn Tumblr

Kabir-Khan-1

ಕರಾಚಿ: ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅವರ ಮೇಲೆ ಗುಂಪೊಂದು ಹಲ್ಲೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕರಾಚಿಯಿಂದ ಲಾಹೋರ್ ಗೆ ತೆರಳುತ್ತಿದ್ದ ಭಜರಂಗಿ ಭಾಯಿಜಾನ್ ಹಾಗೂ ಫ್ಯಾಂಟೊಮ್ ಚಿತ್ರದ ನಿರ್ದೇಶಕ ಕಬೀರ್ ಖಾನ್ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದರು. ಕಬೀರ್ ಖಾನ್ ಅವರು ಭಾರತೀಯ ನಿವೃತ್ತ ಸೇನಾಧಿಕಾರಿಯೊಬ್ಬರು ಜೈಶ್ ಇ ಮೊಹಮ್ಮದ ಉಗ್ರ ಸಂಘಟನೆಯ ಮುಖ್ಯಸ್ಥ ಹಫಿಜ್ ಸಯೀದ್ ಅವರನ್ನು ಹತ್ಯೆ ಮಾಡುವ ಕುರಿತು ಫ್ಯಾಂಟೊಮ್ ಚಿತ್ರ ಮಾಡುತ್ತಿದ್ದಾರೆ.

ಸೈಫ್ ಅಲಿ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ.

ಇಂದು ಕರಾಚಿ ವಿಮಾನ ನಿಲ್ದಾಣದಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ಗುಂಪೊಂದು, ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ರಾ ಅಧಿಕಾರಿ ಕುಲಭೂಷಣ್ ಜಾದವ್ ಅವರ ಬಗ್ಗೆ ಏಕೆ ನೀವು ಸಿನಿಮಾ ಮಾಡುವುದಿಲ್ಲ? ಎಂದು ಪ್ರಶ್ನಿಸಿದರು. ನಿಮ್ಮ ಚಿತ್ರಗಳಲ್ಲಿ ಯಾವಾಗಲೂ ಭಾರತೀಯರನ್ನೇ ಹೀರೋ ಮಾಡುವುದು ಏಕೆ ಎಂದು ಬಾಲಿವುಡ್ ನಿರ್ದೇಶಕನನ್ನು ತರಾಟೆಗೆ ತೆಗೆದುಕೊಂಡರು.

Write A Comment