ಕನ್ನಡ ವಾರ್ತೆಗಳು

‘ಮರಗಳ ಮದುವೆ’- ಅಶ್ವಥ್ಥ ಮರ ಹಾಗೂ ಕಹಿಬೇವಿನ ಗಿಡಕ್ಕೆ ಕುಂದಾಪುರದಲ್ಲಿ ‘ಶುಭ ವಿವಾಹ’

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ಎಲ್ಲೆಡೆ ಈಗ ಮದುವೆ ಸೀಸನ್. ನಿತ್ಯ ನೂರರು ಮದುವೆ-ಮುಂಜಿಗಳು ತಾಲೂಕಿನಲ್ಲಿ ನಡೆಯುತ್ತಲೇ ಇದೆ. ಆದರೇ ಕುಂದಾಪುರದ ಕಂಡ್ಲೂರಿನಲ್ಲಿ ಅಪರೂಪದ ಮದುವೆಯೊಂದು ನಡೆಯಿತು. ಆದರೇ ಇಲ್ಲಿ ವಧುವರರು ಮಾತ್ರ ಮನುಷ್ಯರಲ್ಲ. ಬದಲಾಗಿ ಮರಗಳು. ಈ ಮದುವೆಯ ವಿಶೇಷತೆ ಬಗೆಗಿನ ಸ್ಟೋರಿಯಿಲ್ಲಿದೆ ಓದಿರಿ.

ಕುಂದಾಪುರ ತಾಲೂಕಿನ ಕಂಡ್ಲೂರು ಕಟ್ಟಿನಗುಂಡಿ ಎಂಬಲ್ಲಿ ಬುಧವಾರ ಸಂಭ್ರಮದ ವಾತಾವರಣ. ಬಾಳೆಮರಗಳಿಂದ, ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಆ ಮಂಟಪ ಮದುವೆ ಮಂಟಪವಲ್ಲ, ಅದು ಅಶ್ವಥ್ಥ ಮರದ ಕಟ್ಟೆ. ಅಲ್ಲಿ ಇದ್ದಿದ್ದು ಮಾಮೂಲಿ ಪೂಜೆಯಲ್ಲ, ಬದಲಾಗಿ ಅಶ್ವಥ್ಥ ಮರಕ್ಕೆ ವಿವಾಹ ಕಾರ್ಯಕ್ರಮ ಹಾಗೂ ಉಪನಯನ ಮಾಡುವ ಧಾರ್ಮಿಕ ಕಾರ್ಯಕ್ರಮ. ಕಂಡ್ಲೂರು ಮುಳ್ಳುಗುಡ್ಡೆ ಮನೆ ಸಕಲ ಕುಟುಂಬಸ್ಥರು ಹಮ್ಮಿಕೊಂಡ ಕಾರ್ಯಕ್ರಮವಿದು.

Kundapura_Ashwaththa Tree_Mariage (10) Kundapura_Ashwaththa Tree_Mariage (8) Kundapura_Ashwaththa Tree_Mariage (29) Kundapura_Ashwaththa Tree_Mariage (22) Kundapura_Ashwaththa Tree_Mariage (26) Kundapura_Ashwaththa Tree_Mariage (24) Kundapura_Ashwaththa Tree_Mariage (25) Kundapura_Ashwaththa Tree_Mariage (23) Kundapura_Ashwaththa Tree_Mariage (19) Kundapura_Ashwaththa Tree_Mariage (17) Kundapura_Ashwaththa Tree_Mariage (16) Kundapura_Ashwaththa Tree_Mariage (15) Kundapura_Ashwaththa Tree_Mariage (13) Kundapura_Ashwaththa Tree_Mariage (7) Kundapura_Ashwaththa Tree_Mariage (5) Kundapura_Ashwaththa Tree_Mariage (1) Kundapura_Ashwaththa Tree_Mariage (4) Kundapura_Ashwaththa Tree_Mariage (3) Kundapura_Ashwaththa Tree_Mariage (2) Kundapura_Ashwaththa Tree_Mariage (9) Kundapura_Ashwaththa Tree_Mariage (12) Kundapura_Ashwaththa Tree_Mariage (11) Kundapura_Ashwaththa Tree_Mariage (18) Kundapura_Ashwaththa Tree_Mariage (14) Kundapura_Ashwaththa Tree_Mariage (21) Kundapura_Ashwaththa Tree_Mariage (20) Kundapura_Ashwaththa Tree_Mariage (6)

ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳಂತೆ ಅಶ್ವಥ್ಥನಿಗೆ ಪ್ರತಿಷ್ಟಾ ಪೂಜೆ, ಪ್ರತಿಷ್ಟಾ ಹೋಮ, ನವಗ್ರಹ ಹೋಮ, ನವಗ್ರಹ ಪೂಜೆ, ನವಗ್ರಹ ದಾನಾಧಿಗಳು, ಬ್ರಹ್ಮವೃಕ್ಷವಾದ ಕಾರಣ ಬ್ರಹ್ಮೋಪದೇಶ, ಭಿಕ್ಷಾ ಕ್ರಮ ಮೊದಲಾದ ಪೂಜಾ ಕೈಂಕರ್ಯಗಳು ನಡೆದ ಬಳಿಕ ಮದುವೆಯ ವರ ಅಶ್ವಥ್ಥ ಮರ ಸಿಂಗಾರಗೊಂಡು ಪೇಟ ಧರಿಸಿ ಕಾಯುತ್ತಿದ್ದರೇ ಇತ್ತ ವಧುವಿನ ಮನೆಯಿಂದ ವಧು ಕಹಿಬೇವಿನ ಗಿಡ ಸಿಂಗಾರಗೊಂಡು ಕಳಶ ಕನ್ನಡಿ ಹಿಡಿದ ಮಹಿಳೆಯರು, ಮನೆಯ ಪುರುಷರ ಸಮೇತ ಸ್ಯಾಕ್ಸೋಫೋನ್ ವಾದನದ ದಿಬ್ಬಣದಲ್ಲಿ ಸಾಗಿಬಂದು ಸ್ಥಳಿಯ ರಾಮಮಂದಿರದಲ್ಲಿ ಪೂಜೆ ಸಲ್ಲಿಸಿ ಮದುವೆ ಮಂಟಪಕ್ಕೆ ಬಂದೊಡನೆಯೇ ಆಕೆಗೂ ಇನ್ನಷ್ಟು ಸಿಂಗಾರ.

ಬಲಬದಿಯಲ್ಲಿ ಕಹಿಬೇವಿನ ಗಿಡ ನೆಟ್ಟು ಅದಕ್ಕೆ ಗುಲಾಬಿ ಬಣ್ಣದ ಸೀರೆ, ಕುತ್ತಿಗೆಗೆ ಸರ ಹಾಕಿದ್ದಲ್ಲದೇ ಕೈಗೆ ಬಳೆ ತೊಡಿಸಿ ವಧು-ವರರಿಬ್ಬರಿಗೂ ಹಾರ ಹಾಕಲಾಯಿತು. ಈತನ್ಮಧ್ಯೆಯೇ ವಧುವಿನ ಕಡೆಯವರಿಂದ ಧಾರೆ ಎರೆಯುವ ಸಂಪ್ರದಾಯ. ಗಟ್ಟಿಮೇಳದ ಶಬ್ಧದ ನಡುವೆಯೇ ಮಾಂಗಲ್ಯಧಾರಣೆಯೂ ನಡೆಯಿತು. ನಂತರದಲ್ಲಿ ಮುತ್ತೈದೆಯರಿಂದ ಆರತಿ, ಸಂಪ್ರದಾಯದ ಹಾಡುಗಳು ಕೇಳಿಬಂದವು. ನೆರೆದ ಎಲ್ಲರಲ್ಲಿಯೂ ಸಂತಸದ ಛಾಯೆ. ಮುಳ್ಳುಗುಡ್ಡೆ ಮನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿದಂತೆ ನೂರಾರು ಜನರು ಈ ಶುಭಸಮಾರಂಭಕ್ಕೆ ಸಾಕ್ಷಿಯಾದ್ರು.

ಸುಮಾರು ನೂರಾರು ವರ್ಷಗಳ ಇತಿಹಾಸವಿರುವ ಕಂಡ್ಲೂರು ಮುಳ್ಳುಗುಡ್ಡೆ ಮನೆಯಲ್ಲಿನ ತುಳಸಿಕಟ್ಟೆಯಲ್ಲಿ ಅಶ್ವಥ್ಥ ಗಿಡವೊಂದು ಹುಟ್ಟಿತ್ತು, ಅದನ್ನು ಕಿತ್ತು ತೆಗೆದು ಇನ್ನೊಂದೆಡೆ ನೆಟ್ಟು ಮುಂದಿನ ದಿನಗಳಲ್ಲಿ ಮದುವೆ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿದ ಪ್ರಕಾರ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಳ್ಳುಗುಡ್ಡೆ ಮನೆ ಕುಟುಂಬಸ್ಥರೊಬ್ಬರಲ್ಲಾದ ಆನಂದ್ ಬಿ. ಚಂದನ್ ಎನ್ನುವವರು ಅಶ್ವಥ್ಥ ಗಿಡವನ್ನು ತಂದು ಕುಬ್ಜಾ ನದಿ ಸಮೀಪದ ಕಟ್ಟಿನಗುಡಿ ಎಂಬಲ್ಲಿ ನೆಟ್ಟರು. ಇದಾದ ಬಳಿಕ ಎಲ್ಲವೂ ಸುಗಮವಾಗಿದ್ದು ಮದುವೆ ಮಾಡಲು ಮಾತ್ರ ಕಾಲ ಕೂಡಿಬಂದಿರಲಿಲ್ಲ. ಇತ್ತೀಚೆಗೆ ಕುಟುಂಬಕ್ಕೆ ಸಂಬಂದಪಟ್ಟ ೭ ಮನೆಯವರು ಸೇರಿ ಅಶ್ವಥ್ಥನಿಗೆ ಉಪನಯನ ಹಾಗೂ ಮದುವೆ ಮಾಡುವ ಬಗ್ಗೆ ನಿರ್ಧರಿಸಿ ಎಪ್ರಿಲ್ ೨೭ ಬುಧವಾರಕ್ಕೆ ದಿನಾಂಕವನ್ನು ನಿಗದಿ ಮಾಡಿದ್ರು. ಅಂತೆಯೇ ಪುರೋಹಿತರಾದ ಬಳ್ಕೂರು ಮಕ್ಕಿಮನೆ ವೆಂಕಟರಮಣ ಹಾಗೂ ಇತರರ ಪೌರೋಹಿತ್ಯದಲ್ಲಿ ವೃಷಭ ಲಗ್ನ ಸುಮುಹೂರ್ತದಲ್ಲಿ ಮದುವೆ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ವೃಕ್ಷಗಳಲ್ಲಿ ಶ್ರೇಷ್ಟವಾದ ಅಶ್ವಥ್ಥ ಮರ ತ್ರಿಮೂರ್ತಿಗಳ ವಾಸಸ್ಥಾನ ಎನ್ನುವ ಪ್ರತೀತಿ. ಅಶ್ವಥ್ಥ ಮರ ಹಾಗೂ ಕಹಿಬೇವಿನ ಮರವನು ಒಟ್ಟಿಗೆ ನೆಟ್ಟು ಮದುವೆ ಸಂಪ್ರದಾಯ ನಡೆಸಿದರೇ ಧಾರ್ಮಿಕವಗಿಯೂ ಒಳಿತ್ತು ಮತ್ತು ವೈಜ್ಞಾನಿಕವಾಗಿಯೂ ಇವೆರಡೂ ಮರಗಳಿಂದ ಬರುವ ಗಾಳಿ ಉತ್ತಮ ಎನ್ನುವ ನಂಬಿಕೆಯೂ ಇದೆ. ಆನಂದ ಬಿ. ಚಂದನ್ ವರನ ಹಾಗೂ ಸುಬ್ಬು ಮೊಗವೀರ ವಧುವಿನ ಕಡೆಯ ಶಾಸ್ತ್ರಗಳನ್ನು ನೆರವೇರಿಸಿದರು.

Write A Comment